ಕಾಗವಾಡ

ವಾಹನ ಮಾಲೀಕರಿಗೆ ಶುಭ ಸುದ್ದಿ..! ಕಾಗವಾಡದಲ್ಲಿ ಅಪೋಲೋ ಟೈರ್ ಮಳಿಗೆ ಪ್ರಾರಂಭ..!!

ವಾಹನ ಮಾಲೀಕರಿಗೆ ಶುಭ ಸುದ್ದಿ..! ಕಾಗವಾಡದಲ್ಲಿ ಅಪೋಲೋ ಟೈರ್ ಮಳಿಗೆ ಪ್ರಾರಂಭ..!!

        ಕಾಗವಾಡ 11: ಪಟ್ಟಣ, ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಾಹನ ಮಾಲೀಕರಿಗಾಗ ಉತ್ಕೃಷ್ಟ ದರ್ಜೆಯ ಅಪೋಲೋ, ಎಂಆರ್‌ಎಫ್ ಸೇರಿದಂತೆ ಎಲ್ಲ ಕಂಪನಿಗಳ ಟೈರ್‌ಗಳು ಹೊಲ್‌ಸೆಲ್ ಮತ್ತು ಯೋಗ್ಯ ಬೆಲೆಯಲ್ಲಿ ದೊರಕಿಸಿಕೊಡುವ ಉದ್ದೇಶದಿಂದ ಪಟ್ಟಣದಲ್ಲಿ ಟೈರ್ ಶೋರೂಂ ಉದ್ಘಾಟಿಸಿದ್ದೇವೆ. ಗ್ರಾಹಕರು ಇದರ ಲಾಭ ಪಡೆದುಕೊಳ್ಳಬೇಕೆಂದು ಮಾಲೀಕರಾದ ಆರ್‌.ಎಸ್‌. ಪಾಟೀಲ ತಿಳಿಸಿದ್ದಾರೆ. 

            ಅವರು, ಮಂಗಳವಾರ ದಿ. 10 ರಂದು ಪಟ್ಟಣದಲ್ಲಿ ಮಿರಜ್ ರಸ್ತೆಯಲ್ಲಿ ಪೋಲಿಸ್ ಠಾಣೆ ಪಕ್ಕದಲ್ಲಿ ನೂತನ ಅಹಲ್ಯ ಕಿಸಾನ ಸೇವಾ ಕೇಂದ್ರದ ಅಪೋಲೋ ಟೈರ್ ಮಳಿಗೆಯನ್ನು ಗಣ್ಯರೊಂದಿಗೆ ಉದ್ಘಾಟಿಸಿ, ಮಾತನಾಡುತ್ತಿದ್ದರು. ಎಲ್ಲ ಭಾರಿ, ಮಧ್ಯಮ ಹಾಗೂ ಲಘು ವಾಣಿಜ್ಯ ಮತ್ತು ಸ್ವಂತ ವಾಹನಗಳು ಅದರಂತೆ ದ್ವಿಚಕ್ರ ವಾಹನಗಳಿಗಾಗಿ ಅಪೋಲೋ, ಎಂಆರ್‌ಎಫ್ ಸೇರಿದಂತೆ ಎಲ್ಲ ಕಂಪನಿಗಳ ಟೈರ್‌ಗಳು ಯೋಗ್ಯ ಬೆಲೆಯಲ್ಲಿ ಇಲ್ಲಿ ದೊರೆಯಲಿವೆ ಎಂದು ತಿಳಿಸಿದರು. 

           ಈ ವೇಳೆ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಎಂ.ಬಿ. ಪಾಟೀಲ, ಜ್ಯೋತಿ ಪಾಟೀಲ, ಸಂಜು ವಡ್ಡರ, ಸೌರಭ ಪಾಟೀಲ, ನಾಥಗೌಡಾ ಪಾಟೀಲ, ಕಾಕಾ ಪಾಟೀಲ, ಚಿದಾನಂದ ಅವಟಿ, ಪ್ರಕಾಶ ಪಾಟೀಲ, ಅಪ್ಪಾಸಾಬ ಪಾಟೀಲ, ರಮೇಶ ಚೌಗುಲಾ, ಮಹೇಶ ಪಾಟೀಲ, ಸೋಮೇಶ ಪಾಟೀಲ, ಎ.ಆರ್‌. ಪಾಟೀಲ, ಎಎಸ್‌ಐ ಸೋನವಾನೆ ಸೇರಿದಂತೆ ಅನೇಕ ಮುಖಂಡರು, ಪಟ್ಟಣದ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ