ಕಾಗವಾಡ

ರೈತ ಮುಖಂಡರ ಬಂಧನಕ್ಕೆ ಕಾಗವಾಡ ತಾಲೂಕಿನಲ್ಲಿ ಹೊತ್ತಿದ ಕಿಡಿ..! ಆರು ಕಡೆ ರಸ್ತೆ ತಡೆದು ರೈತರಿಂದ ಪ್ರತಿಭಟನೆ..!!

ರೈತ ಮುಖಂಡರ ಬಂಧನಕ್ಕೆ ಕಾಗವಾಡ ತಾಲೂಕಿನಲ್ಲಿ ಹೊತ್ತಿದ ಕಿಡಿ..! ಆರು ಕಡೆ ರಸ್ತೆ ತಡೆದು ರೈತರಿಂದ ಪ್ರತಿಭಟನೆ..!!
Arrest of farmer leaders sparks outrage in Kagwad taluk; farmers stage protests by blocking roads a


          ಕಾಗವಾಡ 05: ಬೆಳಗಾವಿಯಲ್ಲಿ ರೈತ ಮುಖಂಡರ ಬಂಧನದಿಂದ ಕಾಗವಾಡ ತಾಲೂಕಿನಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ರೈತ ಮುಖಂಡರಾದ ಚುಣ್ಣಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ತಾಲೂಕಿನಾದ್ಯಂತ ರೈತರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

         ಗುರುವಾರ ದಿ. 5 ರಂದು ಕಾಗವಾಡ ಪಟ್ಟಣ ಸೇರಿದಂತೆ ಶೇಡಬಾಳ, ಉಗಾರ ಖುರ್ದ, ಐನಾಪೂರ, ಶಿರಗುಪ್ಪಿ ಹಾಗೂ ಕವಲಗುಡ್ಡ ಗ್ರಾಮಗಳಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ಆರಂಭಿಸಿದ್ದಾರೆ. ಏಕಕಾಲದಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಹೋರಾಟಕ್ಕೆ ಇಳಿದಿರುವುದರಿಂದ ಹಲವು ಕಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

           ಈ ವೇಳೆ ಪ್ರತಿಭಟನಾಕಾರರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದ ರೈತರು, ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

         ಒಟ್ಟಿನಲ್ಲಿ ರೈತ ಮುಖಂಡರ ಬಂಧನದ ವಿರುದ್ಧ ಕಾಗವಾಡ ತಾಲೂಕಿನಲ್ಲಿ ಪ್ರತಿಭಟನೆಯ ಕಿಚ್ಚು ವ್ಯಾಪಿಸಿದ್ದು, ರೈತರ ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ. 


ಸುದ್ದಿ ಓದಿ