ತಾಲೂಕಿನಲ್ಲಿ ಭುಗಿಲೆದ್ದ ರೈತರ ಆಕ್ರೋಶ ಕಾಗವಾಡ, ಶೇಡಬಾಳ, ಶಿರಗುಪ್ಪಿ, ಐನಾಪೂರ, ಜುಗೂಳ ಸಂಪೂರ್ಣ ಬಂದ್
ಕಾಗವಾಡ 31: ತಾಲೂಕಿನಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಕಾಗವಾಡ ಪಟ್ಟಣ ಸೇರಿದಂತೆ ಶೇಡಬಾಳ, ಐನಾಪೂರ, ಉಗಾರ ಬುದ್ರಕ್, ಉಗಾರ ಖುರ್ದ, ಶಿರಗುಪ್ಪಿ, ಜುಗೂಳ ಗ್ರಾಮಗಗಳು ಸಂಪೂರ್ಣ ಸ್ಥಬ್ಧಗೊಂಡಿವೆ.
ಶನಿವಾರ ದಿ. 31 ರಂದು ರೈತರು ಕರೆಕೊಟ್ಟಿದ್ದ ಕರ್ನಾಟಕ ಬಂದ್‌ಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ರೈತ ಸಂಘಟನೆಗಳು ಸೇರಿದಂತೆ ಕನ್ನಡಪರ ಸಂಘಟನೆಗಳು, ವಕೀಲರ ಸಂಘ ಮತ್ತು ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ, ಸ್ವಯಂ ಘೋಷಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಕಾಗವಾಡ ಪಟ್ಟಣದ ಚನ್ನಮ್ಮಾ ವೃತ್ತದಲ್ಲಿ ಸಾವಿರಾರು ರೈತರು ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ವಿಜಯಪೂರ, ಸಾಂಗಲಿ, ಚಿಕ್ಕೋಡಿ ರಸ್ತೆ ಬಂದ್ ಮಾಡಿ, ಪ್ರತಿಭಟಿಸಿದರು. ಶಿರಗುಪ್ಪಿಯಲ್ಲಿ ಗೋಟೂರು-ಜೆವರ್ಗಿ ರಸ್ತೆ ಬಂದ್ ಮಾಡಿ, ಪ್ರತಿಭಟನೆ ಕೈಗೊಂಡರು.
ಇನ್ನೂ ಶೇಡಬಾಳ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ರಸ್ತೆ ತಡೆದ ರೈತರು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಜುಗೂಳ ಗ್ರಾಮದ ಮುಖ್ಯ ಪೇಟೆಯಲ್ಲಿ ರಸ್ತೆಯ ಮೇಲೆ ರೈತರು ಒಲೆ ಹೂಡಿ, ಅಡುಗೆ ಮಾಡಿ, ಪ್ರತಿಭಟಿಸಿದರು. ಈ ಸಮಯದಲ್ಲಿ ಸಾವಿರಾರು ರೈತರು, ರೈತ ಮುಖಂಡರು, ಕನ್ನಡಪರ ಸಂಘಟನೆಗಳ ಪದಾಧೀಕಾರಿಗಳು ಉಪಸ್ಥಿತರಿದ್ದರು.