ಉಗಾರ ಬುದ್ರಕ್ದಲ್ಲಿ ತಾಲೂಕಾ ತಳವಾರ ಸಮಾಜ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ..!!
ಲೋಕದರ್ಶನ ವರದಿ
ಕಾಗವಾಡ 27: ತಾಲೂಕಾ ತಳವಾರ ಸಮಾಜ ಸೇವಾ ಅಭಿವೃದ್ಧಿ ಸಂಘ ಮತ್ತು ಉಗಾರ ಬುದ್ರಕ್ ತಳವಾರ ಸಮಾಜದ ವತಿಯಿಂದ ಉಗಾರ ಬುದ್ರಕ್ ಗ್ರಾಮದ ತಳವಾರ ಸಮುದಾಯ ಭವನದಲ್ಲಿ ಸೋಮವಾರ ದಿ. 26 ರಂದು ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿನ್ನು ಸಂಭ್ರಮದಿಂದ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಪೂಜೆಯೊಂದಿಗೆ ಆಚರಿಸಲಾಯಿತು.
ಈ ಸಮಯದಲ್ಲಿ ತಾಲೂಕು ತಳವಾರ ಸಮಾಜ ಸೇವಾ ಅಭಿವೃದ್ಧಿ ಸಂಘ ಅಧ್ಯಕ್ಷ ಸುರೇಶ ಕೋಳಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ತಾಲೂಕಾ ತಳವಾರ್ ಸಮಾಜ ಸೇವಾ ಸಂಘದ ವತಿಯಿಂದ ಆಚರಿಸುತ್ತಿದ್ದೇವೆ. ಎಂದು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಕಾಗವಾಡ ತಾಲೂಕಾ ತಳವಾರ ಸಮಾಜ ಸೇವಾ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಭೈರ್ಪ ಹೆಗಡೆ, ಗೌರವಾಧ್ಯಕ್ಷ ಅಶೋಕ ಕೋಳಿ, ಕಾರ್ಯದರ್ಶಿ ಸುನೀಲ ಮಿರಜೆ, ಕಾನೂನು ಸಲಹೆಗಾರ ಸಚೀನ ಮಿರಜೆ,
ಸದಸ್ಯರಾದ ಪರಶುರಾಮ ಗೂಗಡೆ, ವಿಠ್ಠಲ ಗಸ್ತಿ, ಅಣ್ಣಾಸಾಬ ಲಂಗೋಟಿ, ಮಾಹದೇವ ಕೋಳಿ, ಸುಭಾಶ ಕೋಳಿ, ಭಗವಂತ ತಳವಾರ, ಮಾರುತಿ ಸನದಿ, ಅಪ್ಪಾಸಾಬ ಸನದಿ, ಉತ್ತಮ ಕೋಳಿ, ಪಾಪು ಕೋಳಿ, ಎಂ.ಟಿ, ತಳವಾರ, ನರಸು ಇಂಗಳೆ, ರಾಜು ಕೋಳಿ,
ರಮೇಶ ಕೋಳಿ, ದೀಪಕ ತಳವಾರ, ಪುರಂದರ ತಳವಾರ, ಸಂತೋಶ ಕೋಳಿ, ಉಮೇಶ ಕೋಳಿ, ಉಗಾರ ತಳವಾರ್ ಸಮಾಜದ ಅಧ್ಯಕ್ಷ ಭಗವಂತ ತಳವಾರ ಸೇರಿದಂತೆ ಸಮಸ್ತ ತಳವಾರ ಸಮಾಜ ಭಾಂದವರು ಉಪಸ್ಥಿತರಿದ್ದರು.