ಗೋಕಾಕ್

ಭಾರತೀಯ ಸಂಸ್ಕೃತಿಗೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ : ಡಾ. ಕಟ್ಟಿಮನಿ

ಭಾರತೀಯ ಸಂಸ್ಕೃತಿಗೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ : ಡಾ. ಕಟ್ಟಿಮನಿ

ಲೋಕದರ್ಶನ ವರದಿ 

                ಗೋಕಾಕ 27: ನಗರದ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್‌. ಎಸ್‌. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ದಿನಾಂಕ 26-10-2026 ರಂದು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ​‍್ಿಸಲಾಯಿತು.

             ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪ್ರಮೋದ ಪಿ. ಕಟ್ಟಿಮನಿರವರು ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣವು ಭಾರತೀಯ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ಮಾನವೀಯ ಗುಣಗಳನ್ನು ಪ್ರತಿಬಿಂಬಿಸುವ ಮಹಾನ್ ಕಾವ್ಯವಾಗಿದೆ ಎಂದು ತಿಳಿಸಿದರು.

           ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಬಿ. ಎಮ್‌. ತುರಡಗಿರವರು ಮಾತನಾಡಿ, ವಾಲ್ಮೀಕಿಯವರ ಜೀವನವು ಪರಿವರ್ತಿನೆ, ಪರಿಶ್ರಮ, ಜ್ಞಾನ ಮತ್ತು ಸತ್ಯದ ಮಹತ್ವವನ್ನು ಸಾರುತ್ತದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅವಳಡಿಸಿಕೊಳ್ಳಬೇಕು ಎಂದು ಹೇಳಿದರು.

          ಕಾರ್ಯಕ್ರಮದಲ್ಲಿ ಉಪ-ಪ್ರಾಚಾರ್ಯರಾದ ಡಾ. ಆರ್‌. ಎಸ್‌. ಬಳಿಗಾರ, ಎನ್‌.ಎಸ್‌. ಎಸ್‌. ಕಾರ್ಯಕ್ರಮಾಧಿಕಾರಿಗಳಾದ ಡಾ. ಸಿ. ಎ. ಮಸರಗುಪ್ಪಿ ಮತ್ತು ಎಮ್‌. ವ್ಹಿ. ಗೊರಗುದ್ದಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ  ಎ. ಎಲ್‌. ದರಗದ ಉಪಸ್ಥಿತರಿದ್ದರು. 


ಸುದ್ದಿ ಓದಿ