ಬೆಟಗೇರಿ: ವೀರಭದ್ರೇಶ್ವರ ಕಲ್ಯಾಣ ಮಂಟಪ ಭೂಮಿ ಪೂಜೆ
ಬೆಟಗೇರಿ 13 : ಗ್ರಾಮೀಣ ವಲಯದ ವಿವಿಧ ದೇವಾಲಯಗಳಲ್ಲಿರುವ ಕಲ್ಯಾಣ ಮಂಟಪಗಳಿಂದ ಬಡವರಿಗೆ ಮದುವೆ, ಮುಂಜೆ ಮಾಡಿಕೊಳ್ಳಲು, ಸ್ಥಳೀಯರಿಗೆ ಸಭೆ, ಸಮಾರಂಭ ಹಮ್ಮಿಕೊಳ್ಳಲು ಬಹಳ ಅನುಕೂಲವಾಗಿವೆ ಎಂದು ವೇದಮೂರ್ತಿ ವಿಜಯ ಹಿರೇಮಠ ಹೇಳಿದರು .ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ದೇವಾಲಯದ ಆವರಣದಲ್ಲಿ ಅ.12ರಂದು ವೀರಭದ್ರೇಶ್ವರ ಕಲ್ಯಾಣ ಮಂಟಪ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಮ್ಮ ನಾಡಿನ ಜನರು ದೇವರ ಬಗ್ಗೆ ಅಪಾರ ನಂಬಿಕೆಯುಳ್ಳವರಾಗಿದ್ದಾರೆ ಎಂದರು. ಸ್ಥಳೀಯ ಯುವ ಮುಖಂಡ ಮಹಾಂತೇಶ ಸಿದ್ನಾಳ ಮಾತನಾಡಿ, ಇಲ್ಲಿಯ ಶ್ರೀ ವೀರಭದ್ರೇಶ್ವರ ದೇವರ ದೇವಾಲಯ ಸಮಗ್ರ ಪ್ರಗತಿಗೆ ಸ್ಥಳೀಯರ ಸಹಾಯ, ಸಹಕಾರ ಅತ್ಯಂತ ಅವಶ್ಯಕವಾಗಿದೆ. ಸ್ಥಳೀಯರು ನೀಡಿದ ಸುಮಾರು 50 ಲಕ್ಷ ರೂ.ಗಳ ಹಣದಲ್ಲಿ ನೂತನ ವೀರಭದ್ರೇಶ್ವರ ಕಲ್ಯಾಣ ಮಂಟಪ ನಿರ್ಮಿಸಲಾಗುವದು ಎಂದರು. ವೇದಮೂರ್ತಿ ಸಂಗಯ್ಯ ಹಿರೇಮಠ ಸಾನಿಧ್ಯ, ಈರಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು. ಸ್ಥಳೀಯ ವೀರಭದ್ರೇಶ್ವರ ದೇವರ ಆವರಣದಲ್ಲಿ ವೀರಭದ್ರೇಶ್ವರ ಕಲ್ಯಾಣ ಮಂಟಪ ಭೂಮಿ ಪೂಜೆ ನೆರವೇರಿದ ಬಳಿಕ ಅಂಬಲಿ ಪ್ರಸಾದ ಸೇವೆ ಹಾಗೂ ಸ್ಥಳೀಯ ವೀರಭದ್ರೇಶ್ವರ ದೇವರ ಮಹಿಳಾ ಭಕ್ತ ಸುಂಗಲೆಯರಿಂದ ಆರತಿ ಬೆಳಗುವ ಕಾರ್ಯಕ್ರಮ ನಡೆಯಿತು. ಬಸವಂತ ಕೋಣಿ, ಮಹಾಂತೇಶ ದಂಡಿನ, ಶ್ರೀಧರ ದೇಯಣ್ಣವರ, ಲಕ್ಷ್ಮಣ ನೀಲಣ್ಣವರ, ಈಶ್ವರ ಮುಧೋಳ, ಮಲ್ಲಪ್ಪ ಪಣದಿ, ಶಿವಾಜಿ ನೀಲಣ್ಣವರ, ಬಸವರಾಜ ದೇಯಣ್ಣವರ, ಲಕ್ಷ್ಮಣ ಸೋಮಗೌಡ್ರ, ಭೀಮಶೆಪ್ಪ ಬಳಿಗಾರ, ಹನುಮಂತ ಆನೆಗುಂದಿ, ರಾಮಣ್ಣ ಮಾಳೇದ, ಮಹಾಂತೇಶ ಮಾಳೇದ, ಬಸಪ್ಪ ತೋಟಗಿ, ಈಶ್ವರ ದೇಯಣ್ಣವರ, ಮುತ್ತೆಪ್ಪ ದಂಡಿನ, ಬಸಪ್ಪ ಹುಬ್ಬಳ್ಳಿ, ಅಪ್ಪಯ್ಯ ಕಡಕಭಾಂವಿ, ಬಸು ದೇಯಣ್ಣವರ, ರುದ್ರ್ಪ ಮಾಡಲಗಿ, ಕಸ್ತೂರೆವ್ವ ಹಿರೇಮಠ ಮತ್ತು ಸುಮಮಗಲೆಯರು, ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಆಯೋಜಕ ಸಮಿತಿ ಸದಸ್ಯರು, ಮತ್ತೀತರರು ಇದ್ದರು.