ತಾ.ಪಂ.ಜಿ.ಪಂ. ಮೀಸಲಾತಿ ಪುನ: ಪರೀಶೀಲಿಸಿ.
ಗದಗ 13: ತಾಲೂಕ ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಮೀಸಲಾತಿಯನ್ನು ಪುನಃ ಪರೀಶೀಲಿಸಬೇಕೆಂದು ರಾಜ್ಯ ಎಸ್‌ಸಿ.ಎಸ್‌ಟಿ ನಕಲಿಜಾತಿ ಪ್ರಮಾಣ ಪತ್ರ ತಡೆ ಸಮಿತಿ ಗದಗ ಜಿಲ್ಲಾಧ್ಯಕ್ಷ ಶ್ರೀ ಕಾಂತ ಪೂಜಾರ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು 2026 ರಲ್ಲಿ ನಡೆಯಲಿರುವ ಗದಗ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಅದರಲ್ಲಿ ಗದಗ ತಾಲೂಕಿನಲ್ಲಿ ಪರಿಶಿಷ್ಟ ಪಂಗಡಕ್ಕೆ (ಖಖಿ) ಮೀಸಲಾಗಿರುವ 7 ಕ್ಷೇತ್ರಗಳನ್ನೂ ಸಹ ಮಹಿಳೆಯರಿಗೆ (ಖಖಿ ಘಠಜಟಿ) ಎಂದು ಮೀಸಲಾತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಪುರುಷ ಸಮಾಜ ಸೇವಕರಿಗೆ, ಕಾರ್ಯಕರ್ತರು, ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ. ಆದ ಕಾರಣ ನಮ್ಮ ಬೇಡಿಕೆಯಂತೆ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ರ ಪ್ರಕಾರ ಮೀಸಲಾತಿ ನಿಗದಿಪಡಿಸುವಾಗ ಚಕ್ರಾನುಕ್ರಮ * ಪಾಲಿಸಬೇಕು.
ಒಂದು ಬಾರಿ ಮಹಿಳೆಗೆ ಮೀಸಲು ನೀಡಿದ ಕ್ಷೇತ್ರವನ್ನು ಮುಂದಿನ ಚುನಾವಣೆಯಲ್ಲಿ ಸಾಮಾನ್ಯ ಖಖಿ (ಪುರುಷ) ಗೆ ನೀಡಬೇಕು. ಆದರೆ ಈ ಬಾರಿ ಎಲ್ಲಾ 7 ಕ್ಷೇತ್ರಗಳನ್ನು ಖಖಿ ಮಹಿಳೆಗೆ ನೀಡಿರುವುದು ಈ ನಿಯಮಕ್ಕೆ ವಿರುದ್ಧವಾಗಿದೆ. ಇದರಿಂದ ಖಖಿ ಪುರುಷರಿಗೆ ರಾಜಕೀಯವಾಗಿ ಅನ್ಯಾಯವಾಗುತ್ತಿದೆ.