ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2026
ಗದಗ 13: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ, ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಸಭಾಂಗಣ ಗದಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2026 ಕಾರ್ಯಕ್ರಮ ಜರುಗಿತು,
ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಉದ್ಘಾಟಿಸಿ ಮಾತನಾಡಿದರು. ಮಾನಸಿಕ ಕಾಯಿಲೆಯು ಒಂದು ರೋಗವಲ್ಲ. ಮಾನಸಿಕವಾಗಿ ವ್ಯಕ್ತಿ ಬಳಲುತ್ತಿದ್ದರೆ ಅವನಿಗೆ ಸಮಾಲೋಚನೆಯ ಮೂಲಕ ಆತ್ಮಸ್ಥೈರ್ಯ ತುಂಬಿ, ಜೀವನದ ಸವಾಲುಗಳನ್ನು ಎದುರಿಸಲು ಬೆಂಬಲ ನೀಡಬೇಕು. ಮಾನಸಿಕ ರೋಗಿಗಳಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮಾಹಿತಿ ನೀಡಿ ಅವರನ್ನು ಸಬಲರನ್ನಾಗಿ ಮಾಡುವಂತೆ ತಿಳಿಸಿದರು. ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕಾದರೆ ಒಳ್ಳೆಯ ಆರೋಗ್ಯದ ರೂಢಿಗಳನ್ನು ಮೈಗೂಡಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣವಾಗುವಂತೆ ಮಾಡಲು ಸಲಹೆ ನೀಡಿದರು. ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ ಜಿ.ಎಸ್ ಪಲ್ಲೇದ ಮಾತನಾಡಿ ಈ ಕಾರ್ಯಕ್ರಮ ಆಚರಿಸುವ ಉದ್ದೇಶಗಳನ್ನು ತಿಳಿಸಿ, ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು, ಮಾನಸಿಕ ರೋಗಿಗಳನ್ನು ಗುರುತಿಸಿ ಅವರಿಗೆ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಿ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢ ಗೊಳಿಸುವುದು. ಮಾನಸಿಕ ಆರೋಗ್ಯ ರಕ್ಷಣಾ ಹಕ್ಕು, ಜೀವಿಸುವ ಹಕ್ಕು, ಘನತೆಯಿಂದ ಬದುಕುವ ಹಕ್ಕು, ವೈದ್ಯಕೀಯ ದಾಖಲೆಗಳನ್ನು ಪಡೆಯುವ ಹಕ್ಕು ಮಾನವನ ಮೂಲಭೂತ ಹಕ್ಕುಗಳಾಗಿವೆ. ಅದು ಮಕ್ಕಳಿಂದ ಹಿಡಿದು ವಯೋವೃದ್ಧರಿಗೂ ಅನ್ವಯಿಸುತ್ತದೆ. ಆದ್ದರಿಂದ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಜಾಗೃತಿ ಮೂಡಿಸುವದರೊಂದಿಗೆ ಸಮಾಜದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಭವಿಷ್ಯದತ್ತ ಹೆಜ್ಜೆ ಇಡಲು ತಿಳಿಸಿದರು. ಮಾನಸಿಕ ಆರೋಗ್ಯವನ್ನು ಬಲಪಡಿಸಿಕೊಳ್ಳಲು ಅತ್ಯುತಮವಾದ ಸಂಸ್ಕಾರ, ಜ್ಞಾನ, ಕೌಶಲ್ಯ, ನೈತಿಕ ಮೌಲ್ಯ, ಒಳ್ಳೆಯ ಸ್ನೇಹಿತರ ಸಹವಾಸ ಹಾಗೂ ಸಾಮಾಜಿಕ ಮಾಧ್ಯಮಗಳ ಕಡಿಮೆ ಬಳಕೆ ಒಳಿತು ಎಂದು ತಿಳಿಸಿ ಪೋಕ್ಸೋ ಖಾಯ್ದೆ ಕುರಿತು ಮಾಹಿತಿ ನೀಡಿದರು.
ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಜಿತೇಂದ್ರ ಮುಗಳಿ ಇವರು ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಹಿ “ವಾಸ್ತವ ಅನುಭವಗಳ ಆಲಿಕೆ: ನೈಜ ಧ್ವನಿಗಳು : ನೈಜ ಬದಲಾವಣೆ” ಘೋಷವಾಕ್ಯದಂತೆ ಮಾನಸಿಕ ಆರೋಗ್ಯವನ್ನು ವಾಸ್ತವ ಅಂಶಗಳ ಅನುಭವವನ್ನು ಬಳಸಿಕೊಂಡು ಜನರು ನಿಜವಾದ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾಗಿಯೂ ಬದಲಾವಣೆಗಳನ್ನು ನೀರೀಕ್ಷಿಸಬಹುದು ಎಂದರು.
ವಿನಾಯಕ ಕಾಳೆ ಸೈಕ್ಯಾಟ್ರಿಕ್ ಸೋಶಿಯಲ್ ವರ್ಕರ, ಶ್ರೀಮತಿ ಶೋಭಾ ವಡ್ಡರ ಸೈಕ್ಯಾಟ್ರಿಕ್ ನರ್ಸ, ವಿನಾಯಕ ವಾಗಮೋರೆ ರೆಕಾರ್ಡ ಕೀಪರ್ ಹಾಗೂ ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಗದಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಂದಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಬೆನ್ನೂರ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸಂಗೀತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.