ಚಿತ್ರಕಲಾ ಸ್ಪರ್ಧೆ: ಯಮನೂರ್ಪಗೆ ತೃತೀಯ ಬಹುಮಾನ
ವಿಜಯನಗರ (ಹೊಸಪೇಟೆ) 13: ರಾಯಚೂರು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀರಿದ್ದರೆ ನಾಳೆ ಎಂಬ ಘೋಷವಾಕ್ಯದಡಿಯಲ್ಲಿ ನಮ್ಮ ಭೂಮಿ ನಮ್ಮ ನೀರು ನಮ್ಮ ಶಕ್ತಿ ಎಂಬ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರಿ್ಡಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹೊಸಪೇಟೆಯ ಸರ್ಕಾರಿ ಪ್ರೌಢಶಾಲೆ ಅನಂತಶಯನಗುಡಿಯ ವಿದ್ಯಾರ್ಥಿ ಯಮನೂರ್ಪ ಅವರು ತೃತೀಯ ಬಹುಮಾನದೊಂದಿಗೆ ರೂ.10,000 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಅಲ್ಲದೆ, ಹೊಸಪೇಟೆಯ ಕೆ.ಸಿ.ಎ. (ಏಅಂ) ಶಾಲೆಯ ವಿದ್ಯಾರ್ಥಿ ಗೌತಮ್ ಕೆ. ಚಿತ್ರಗಾರ ಹಾಗೂ ಸರ್ಕಾರಿ ಪ್ರೌಢಶಾಲೆ ನೆಹರೂ ಕಾಲೋನಿಯ ವಿದ್ಯಾರ್ಥಿನಿ ಸಭಾ ಅಲಿಯಾ ಇಬ್ಬರಿಗೂ ಸಮಾಧಾನಕರ ಬಹುಮಾನವಾಗಿ ತಲಾ ರೂ.5,000 ನಗದು ಪ್ರಶಸ್ತಿ ಲಭಿಸಿದೆ. ಸಾಧನೆಗೈದ ಮೂವರೂ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೆಂಕಟೇಶ್ ರಾಮಚಂದ್ರ್ಪ ಹಾಗೂ ಬಳ್ಳಾರಿಯ ಜಿಲ್ಲಾ ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಸಂತ್ ಅವರು ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.