ಹೊಸಪೇಟೆ

ಡಾ.ಬಸವರಾಜ.ಕೆ ಅವರಿಗೆ “ಸಾಹಿತ್ಯ ಭೂಷಣ” ಪುರಸ್ಕಾರ

ಡಾ.ಬಸವರಾಜ.ಕೆ ಅವರಿಗೆ “ಸಾಹಿತ್ಯ ಭೂಷಣ” ಪುರಸ್ಕಾರ

ಲೋಕದರ್ಶನ ವರದಿ 


ಹೊಸಪೇಟೆ 16: ಡಾ.ಬಸವರಾಜ.ಕೆ ಮುಖ್ಯಗುರುಗಳು.ಸ.ಕಿ.ಪ್ರಾ.ಶಾಲೆ 88 ಮುದ್ಲಾಪುರ ತಾ ಹೊಸಪೇಟೆ ಇವರಿಗೆ ಸೂರ್ಯ ಪೌಂಡೇಶನ್ ಹಾಗೂ ಸ್ಪಾರ್ಕ್‌ ಅಕಾಡೆಮಿ ಬೆಂಗಳೂರು ಇವರು ಡಾ.ಬಸವರಾಜ.ಕೆ ರವರ ಸಾಹಿತ್ಯ ಹಾಗೂ ನಿರೂಪಣಾ ಕ್ಷೇತ್ರದಲ್ಲಿನ ಅನುಭವ ಗುರುತಿಸಿ ದಿನಾಂಕ 15ರಂದು ಬೆಂಗಳೂರಿನ ಡಾ.ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ನಡೆದ ಂಉಖಞಚಿಡಿಣ ಹಬ್ಬದ ಶುಭ ಸಂದರ್ಭದಲ್ಲಿ “ಸಾಹಿತ್ಯ ಭೂಷಣ” ಪುರಸ್ಕಾರ ನೀಡಿ ಗೌರವಿಸಲಾಗಿದೆ. 


ಪುರಸ್ಕಾರಕ್ಕೆ ಭಾಜನರಾದ ಡಾ.ಬಸವರಾಜ.ಕೆ ಇವರಿಗೆ ಕ.ರಾ.ಸ.ನೌ.ಸಂಘ ಜಿಲ್ಲಾ ಶಾಖೆ ವಿಜಯನಗರದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು .ಕ.ರಾ.ಪ್ರಾ.ಶಾ.ಶಿ.ಸಂಘ ಹೊಸಪೇಟೆ ಹಾಗೂ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸ್ನೇಹಿತರು, ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ