ಶಿಗ್ಗಾವ್

ಕುನ್ನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಸಹಕಾರ ಸಂಘ ಪ್ರಶಸ್ತಿ

ಕುನ್ನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಸಹಕಾರ ಸಂಘ ಪ್ರಶಸ್ತಿ

 ಶಿಗ್ಗಾವಿ  16: ಹಿರೇಕೆರೂರನಲ್ಲಿ ರಾಜ್ಯ ಮಟ್ಟದ 73 ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ತಾಲೂಕಿನ ಕುನ್ನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಸಹಕಾರ ಸಂಘ ಎಂದು ಪ್ರಶಸ್ತಿಯನ್ನು ಪಡೆದಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕಿನ ಕುನ್ನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹನುಮಂತಪ್ಪ ಲಮಾಣಿ ಹಾಗೂ ಕಾರ್ಯನಿರ್ವಾಹಕ ಬಿ.ಎನ್‌.ಪಾಟೀಲ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಬಿ.ಎಸ್‌.ಹಿರೇಮಠ, ಇಮಾಮಹುಸೇನ ಕುರಟ್ಟಿ, ಕಮಲವ್ವ ಪುಟ್ಟಪ್ಪ ಅಕ್ಕಿ, ವೀರಭದ್ರ​‍್ಪ ಕರೆಪ್ಪನವರ, ಶಿವಪ್ಪ ಕೊಟಗಾರ, ಮುಂತಾದವರಿದ್ದರು. 


ಸುದ್ದಿ ಓದಿ