ಬೆಂಕಿ ಅವಗಡದಿಂದ ಸುಟ್ಟು ಕರಕಲಾದ ಜನರಲ್ ಸ್ಟೋರ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ- ಆನಂದಸ್ವಾಮಿ
ಲಕ್ಷ್ಮೇಶ್ವರ " 16 ; ನಗರದ ಸೋಮೇಶ್ವರ ಪಾದಗಟ್ಟಿ ಹತ್ತಿರ ಇರುವ ಈರಣ್ಣ ಸಜ್ಜನ್ ಅವರಿಗೆ ಸೇರಿದ ಐ.ಎಸ್.ಬಿ. ಜನರಲ್ ಸ್ಟೋರ್ ಗೆ ಭಾನುವಾರ ಮುಂಜಾನೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಸುಟ್ಟು ಕರಕಲಾದ ಅಂಗಡಿಗೆ ಕೆಪಿಸಿಸಿ ಸದಸ್ಯರು ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಯುವ ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ ಅವರು ಭೇಟಿ ನೀಡಿ, ಘಟನೆಯ ಕುರಿತು ಮಾಹಿತಿ ಪಡೆದು, ನೊಂದ ಈರಣ್ಣ ಸಜ್ಜನ್ ಹಾಗೂ ಅವರ ಕುಟುಂಬದವರಿಗೆ ಧೈರ್ಯ ಮತ್ತು ಸಾಂತ್ವನ ಹೇಳಿದರು.ಈ ಆಕಸ್ಮಿಕ ಘಟನೆಯಿಂದ ಉಂಟಾದ ನಷ್ಟದಿಂದ ಕುಟುಂಬದವರು ಆದಷ್ಟು ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ತಮ್ಮ ವ್ಯಾಪಾರವನ್ನು ಉತ್ತಮವಾಗಿ ಮುನ್ನಡೆಸುವಂತಾಗಲಿ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು ಈ ಸಮಯದಲ್ಲಿ ವ್ಯಾಪಾರಸ್ಥರು ಮುಖಂಡರು ಇದ್ದರು