ಆಯ್ ಎಸ್ ಬಿ ಜನರಲ್ ಸ್ಟೋರಗೆ ಬೆಂಕಿ 15 ಲಕ್ಷ ರೂಪಾಯಿ ಅಪಾರ ಹಾನಿ
ಲಕ್ಷ್ಮೇಶ್ವರ" 15 ; ಪಟ್ಟಣದ ಪಾದಗಟ್ಟಿ ಹತ್ತಿರ ಇರುವ ಆಯ್ ಎಸ್ ಬಿ ಜನರಲ್ ಸ್ಟೋರಿ ಗೆ ಇಂದು ಬೆಳಗಿನ 3 ಗಂಟೆ ಸುಮಾರಿಗೆ ಬಾರಿ ಬೆಂಕಿ ಅವಘಡ ಸಂಭವಿಸಿದ ಬೆಂಕಿ ಅವಘಡದಲ್ಲಿ ಜನರಲ್ ಸ್ಟೋರ್ ನಲ್ಲಿ ಇದ್ದ ಎಲ್ಲಾ ಐಟಂಗಳು ಸುಟ್ಟು ಬೂದಿಯಾಗಿವೆ ಘಟನೆ ವಿವರ ಭಾನುವಾರ ಬೆಳಗಿನ 3: ಗಂಟೆ ಸುಮಾರಿಗೆ ಜನರಲ್ ಸ್ಟೋರ್ ನಲ್ಲಿ ಬೆಂಕಿ ಹತ್ತಿರುವುದು ಕಂಡು ಬಂದಿದೆ ಇದನ್ನು ಗಮನಿಸಿದ ಪಕ್ಕದ ಮನೆಯವರು ಅಗ್ನಿಶಾಮಕ ಇಲಾಖೆಗೆ ಅಂಗಡಿ ಮಾಲಕರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆಯವರು ಜೆಸಿಬಿ ಮುಖಾಂತರ ಶೆಟ್ರಸ್ ಮುರಿದು ಒಳಗೆ ಪ್ರವೇಶಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ ಆದರೆ ಅಷ್ಟರೊಳಗೆ ಜನರಲ್ ಸ್ಟೋರ್ ಒಳಗಡೆ ಇದ್ದ ಎಲ್ಲಾ ಐಟಂಗಳು ಬೆಂಕಿಗೆ ಸುಟ್ಟು ಬೂದಿಯಾಗಿವೆ ಬೆಂಕಿ ಅವಘಡ ಕುರಿತು ಮಾಹಿತಿ ನೀಡಿದ.
ಅಂಗಡಿಯ ಮಾಲಿಕ ಈರಣ್ಣ ಸಜ್ಜನ ಅವರು ಬೆಳಗಿನ ಸಮಯದಲ್ಲಿ ಜನರಲ್ ಸ್ಟೋರ್ ಗೆ ಬೆಂಕಿ ಬಿದ್ದಿದೆ ಬೆಂಕಿ ಅವಘಡದಿಂದ ಸುಮಾರು 10 ರಿಂದ 15 ಲಕ್ಷ ರೂಪಾಯಿ ಅಂದಾಜು ತಿಮ್ಮತ್ತಿನ ಎಲ್ಲ ವಸ್ತುಗಳು ಸುಟ್ಟು ಬೂದಿಯಾಗಿದ್ದು ಶಾರ್ಟ್ ಸರ್ಕಿಟ್ ನಿಂದಲೂ ಅಥವಾ ಯಾರೋ ದುಷ್ಕರ್ಮಿಗಳು ಮಾಡಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ಜನರಲ್ ಸ್ಟೋರಿನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಬೂದಿಯಾಗಿವೆ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು