ಕನ್ನಡದ ಕೀರ್ತಿ ಹೆಚ್ಚಿಸಿದ ಕನ್ನಡ ಸಾಹಿತ್ಯ ಪರಿಷತ್: ಸುಶೀಲಕ್ಕ ಪಾಟೀಲ
ಶಿಗ್ಗಾವಿ 07 : ಕನ್ನಡ ನಾಡು ನುಡಿ, ನೆಲ, ಜಲ, ಭಾಷೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗೋಸ್ಕರ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ಸುಶೀಲಕ್ಕಾ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಬ.ಬು ಮಮ್ಲೆದೇಸಾಯಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದಿ. ಹನುಮಂತಗೌಡ್ರ ಅಯ್ಯನಗೌಡ್ರ ಪಾಟೀಲ, ದಿ. ಕಮಲಮ್ಮ ಮತ್ತು ದಿ. ರುದ್ರಗೌಡ್ರ ಪಾಟೀಲ ಹಾಗೂ ದಿ. ಗುರುಶಾಂತಪ್ಪ ಅಡಿವೆಪ್ಪ ಲಕ್ಷ್ಮೇಶ್ವರ ಮತ್ತು ದಿ. ಲಿಂಗಪ್ಪ ಮಲ್ಲಪ್ಪ ಹೊಳಲಾಪೂರ ಇವರ ಸ್ಮರಣಾರ್ಥ ಕಸಾಪ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು, ಮಹಿಳೆಯರು,
ವಯಸ್ಕರು, ಸಮಾನ ಮನಸ್ಕರು ಮತ್ತು ಎಲ್ಲರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕನ್ನಡ ನಾಡಿನ ಕೀರ್ತಿಯನ್ನು ಬಾನೆತ್ತರಕ್ಕೆ ಹೆಚ್ಚಿಸಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ದತ್ತಣ್ಣ ವೇರ್ಣೇಕರಮಾತನಾಡಿ ಕನ್ನಡಿಗರಾದ ನಾವು ಕನ್ನಡ ಪುಸ್ತಗಳನ್ನು ಮತ್ತು ದಿನಪತ್ರಿಕೆಗಳನ್ನು ಕೊಂಡು ಓದಬೇಕು ಮತ್ತು ಯುವ ಕವಿಗಳಿಗೆ, ಸಾಹಿತಿಗಳಿಗೆ ಸದಾ ಪ್ರೇತ್ಸಾಹಿಸಬೇಕು ಹಾಗೂ ಕನ್ನಡ ನಾಡಿನ ಏಳ್ಗೆಗೆ ನಮ್ಮ ಅಳಿಲು ಸೇವೆ ಸಲ್ಲಿಸಬೇಕು ಎಂದರು. ಮಂಜುನಾಥ ಕಾಳೆ ಉಪನ್ಯಾಸ ನೀಡಿಮಾತನಾಡಿದ ಅವರು ದತ್ತಿ ದಾನಿಗಳನ್ನು ಸ್ಮರಿಸಿದರು ಮತ್ತು ಕನ್ನಡ ಭಾಷೆಯ ಪುರಾತನ ಇತಿಹಾಸ , ಭಾಷಾಭಿಮಾನ ಮತ್ತು ದೇಶಾಭಿಮಾನ ಕುರಿತು ಮಕ್ಕಳಿಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ಹೆಸರೂರ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶಿಗ್ಗಾವಿ ಕೊಡುಗೆ ಅಪಾರವಾದುದು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸರ್ವರ ಸಹಕಾರದೊಂದಿಗೆ ಕಳೆದ ಮೂರು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ತಮ್ಮೆಲ್ಲರ ಸಹಕಾರ ಹಿಗೇಯೇ ಇರಲಿ ಎಂದರು. ಡಾ. ಪ್ರಭುಗೌಡ್ರ ಆರ್ ಪಾಟೀಲ ಮತ್ತು ಆರ್ ಎಫ್ ಹಳ್ಯಾಳ ಮಾತನಾಡಿದರು.
ಮತ್ತು ದತ್ತಿ ದಾನಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ ಅಧ್ಯಕ್ಷ ನಾಗಪ್ಪ ಬೆಂತೂರ, ಸಿ.ಡಿ.ಯತ್ನಳ್ಳಿ, ಆರ್.ಎಸ್.ಭಟ್, ಲಲಿತಾ ಹಿರೇಮಠ, ರವಿ ಕಡಕೋಳ, ಶಂಭು ಕೆರಿ, ಬಸವರಾಜ ಹೊಳಲಾಪೂರ ಮತ್ತು ಕ.ಸಾ.ಪ ಸದಸ್ಯರು, ಆಜೀವ ಸದಸ್ಯರು, ಕನ್ನಡಾಭಿಮಾನಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕೆ ಹೆಚ್ ಬಂಡಿವಡ್ಡರ ಕಾರ್ಯಕ್ರಮ ನಿರ್ವಹಿಸಿದರು.