ಶಿಗ್ಗಾವ್

ಬಿಜೆಪಿ ಪಕ್ಷಕ್ಕೆ ಬೈ,ಬೈ! ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡ

ಬಿಜೆಪಿ ಪಕ್ಷಕ್ಕೆ ಬೈ,ಬೈ! ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡ


  ಲೋಕದರ್ಶನ ವರದಿ 

                   ಶಿಗ್ಗಾವಿ 06: ತಾಲೂಕಿನ ಹೋತನಹಳ್ಳಿ ಗ್ರಾಮದ ಬಿಜೆಪಿ ಮುಖಂಡರು ಪಕ್ಷವನ್ನು ತೊರೆದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಅವರ ಸಮ್ಮುಖದಲ್ಲಿ ಪ್ರಕಾಶ ಅಕ್ಕಿ, ಜಗದೀಶ ಉಳ್ಳಾಗಡ್ಡಿ, ನಿಂಗಪ್ಪ ಕುಂದೂರ,ಮಹಾಲಿಂಗಪ್ಪ ಅಕ್ಕಿ, ಮಂಜುನಾಥ ಕ್ಯಾಮೋಜಿ, ಶಂಬಣ್ಣಾ ಚಂದ್ರ​‍್ಪ ಅಕ್ಕಿ, ಮಂಜುನಾಥ ಬಸರಿಕಟ್ಟಿ, ದ್ಯಾಮಣ್ಣ ಮೂಡೂರ, ಬಾಪುಗೌಡ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಯಾದರು.  ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರೆ​‍್ಡಗೊಂಡ ಪ್ರಕಾಶ ಅಕ್ಕಿ ಮಾತನಾಡಿ ಕಳೆದ 16 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದೇವೆ.

            ಆದರು ಹಿಂದಿನ ಶಾಸಕರು ಬಸವರಾಜ ಬೊಮ್ಮಾಯಿ ಅವರ ಸ್ಪಂದನೆಯಾಗಲಿ ಯಾವುದೇ ತುರ್ತು ಸಂದರ್ಭದಲ್ಲಿ ಭೇಟಿಯಾಗಲಿ ಮಾಡಲು ಆಗಿಲ್ಲ, ಈ ಹಿಂದಿನ ಶಾಸಕರನ್ನು ಭೇಟಿಯಾಗಬೇಕಿದ್ದರೆ ಬಿಜೆಪಿಯಲ್ಲಿದ್ದ ಆಯ್ದ ಮುಖಂಡರನ್ನು ಹುಡುಕಿಕೊಂಡು ಹೋದರೆ ಮಾತ್ರ ಸಿಗುವ ಜನಪ್ರತಿನಿಧಿಗಳ ಅವಶ್ಯಕತೆ ನಮಗೆ ಇಲ್ಲ, ಜನರ ಮಧ್ಯೆ ಇದ್ದು ಸಿಗುವ ಜನಪ್ರತಿನಿಧಿಯ ಅವಶ್ಯಕತೆ ಇದೆ,16 ವರ್ಷಗಳಿಂದ ಅವರಿಗೆ ಮತ ಹಾಕಿ ಅಲೆದಾಡಿದ್ದೇವೆ, ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅವರ ಮಗನಿಗೆ ಮತ ಹಾಕಿ ಅಲೆದಾಡುವ ಪರಿಸ್ಥಿತಿ ಆಗಬಾರದು ಎಂಬ ಅಭಿಪ್ರಾಯವಾಗಿದೆ ಎಂದರು. 


ಸುದ್ದಿ ಓದಿ