ಶಿಗ್ಗಾವ್

ಹಣದ ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯನ್ನು ಪ್ರಜ್ಞಾವಂತ ಮತದಾರರು ತಿರಸ್ಕರಿಸಿದ್ದಾರೆ : ಭರತ ಬೊಮ್ಮಾಯಿ

ಹಣದ ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯನ್ನು ಪ್ರಜ್ಞಾವಂತ ಮತದಾರರು ತಿರಸ್ಕರಿಸಿದ್ದಾರೆ : ಭರತ ಬೊಮ್ಮಾಯಿ
Conscious voters have rejected the illusion that elections can be won through the power of money: Bh


  

             ಶಿಗ್ಗಾವಿ  29 : ಹಣದ ಬಲದಿಂದ ಚುನಾವಣೆ ಗೆಲ್ಲಬಹುದು ಎಂಬ ಕಾಂಗ್ರೆಸ್ ಪಕ್ಷದ ಭ್ರಮೆಯನ್ನು ಪ್ರಜ್ಞಾವಂತಮತದಾರರು ತಿರಸ್ಕರಿಸಿದ್ದಾರೆ ಎಂದು ಯುವ ಮುಖಂಡ ಭರತ ಬೊಮ್ಮಾಯಿ ಹೇಳಿದರು.  ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ನಂತರಮಾತನಾಡಿದ ಅವರು ಪಕ್ಷದ ಸಂಘಟಿತ ಪ್ರಯತ್ನ ಮತ್ತು ಕಾರ್ಯಕರ್ತರ ಶ್ರಮದಿಂದ ಈ ಐತಿಹಾಸಿಕ ಜಯ ಲಭಿಸಿದೆ. ಎಸ್‌.ವಿ. ಸಂಕನೂರು ಅವರ ಟಿಕೆಟ್ ಘೋಷಣೆಯಾದ ಕ್ಷಣದಿಂದಲೇ ಪಕ್ಷದ ಕೆಲಸಗಳು ಅಧಿಕೃತವಾಗಿ ಪ್ರಾರಂಭಗೊಂಡು, ಹಾವೇರಿ ಜಿಲ್ಲೆಯಲ್ಲಿ ಆರೂ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿದ್ದರೂ ಪ್ರತಿ ಮತದಾರರನ್ನು ನೇರವಾಗಿ ತಲುಪುವ ವಿಶೇಷ ವ್ಯೂಹ ರಚಿಸಲಾಗಿತ್ತು.

           ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಕಾರ್ಯಕರ್ತರು ಹಾಗೂ ನಾಯಕರು ಮನೆ ಮನೆಗೆ ತೆರಳಿಮತಯಾಚನೆ ಮಾಡಿದ ಪರಿಣಾಮ ಈ ಗೆಲುವು ಸಾಧ್ಯವಾಯಿತು.  ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಯುವ ಮೋರ್ಚಾ ಅಧ್ಯಕ್ಷ ಅನೀಲ ಸಾತಣ್ಣನವರಮಂಜುನಾಥ ಬ್ಯಾಹಟ್ಟಿ, ಮಲ್ಲೇಶಪ್ಪ ಹರಿಜನ, ಕರಿಯಪ್ಪ ಕಟ್ಟಿಮನಿ, ಬಾಹುಬಲಿ ಅಕ್ಕಿ, ಶಿವಯೋಗಿ ಹುಲಸೋಗಿ, ರೇಣಕನಗೌಡ ಪಾಟೀಲ, ವಸಂತ ತಿಮ್ಮಾಪೂರ, ಶೇಕಣ್ಣ ನಂಜಪ್ಪನವರ, ರಮೇಶ ವನಹಳ್ಳಿ,ಸಚಿನ ಮಡಿವಾಳರ, ಶರೀಫ ನದಾಫ್, ಸಿದ್ದು ಅಕ್ಕಿ ಪ್ರತೀಕ ಕೋಳೆಕರ, ರಮೇಶ ಓಲೆಕಾರ, ಸತೀಶ ಬಾಣದ, ಬಸವರಾಜ ಕಲ್ಲಪ್ಪನವರ, ಕುಮಾರ ಲಮಾಣಿ, ಕಿರಣ ಬಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ