ಬೆಳಗಾವಿ

ಬಡತನ ಮೆಟ್ಟಿ ನಿಂತ ಬಡಿಗವಾಡದ ಚೈತ್ರಾ ನಾಯಿಕಗೆ ನೀಟ್‌ನಲ್ಲಿ ಯಶಸ್ಸು; ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್, ಶಾಲೆಯಲ್ಲಿ ಸನ್ಮಾನ

ಬಡತನ ಮೆಟ್ಟಿ ನಿಂತ ಬಡಿಗವಾಡದ ಚೈತ್ರಾ ನಾಯಿಕಗೆ ನೀಟ್‌ನಲ್ಲಿ ಯಶಸ್ಸು; ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್, ಶಾಲೆಯಲ್ಲಿ ಸನ್ಮಾನ
Chaitra Naik from Badigawada overcomes poverty to achieve success in NEET; secures MBBS seat under g

ಲೋಕದರ್ಶನ ವರದಿ 

             ಗುರ್ಲಾಪೂರ  29: ಸಮೀಪದ ಬಡಿಗವಾಡ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿ ಬಡತನ ಕನಸುಗಳಿಗೆ ಅಡ್ಡಿಯಾಗದೆ, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ಕುಮಾರಿ ಚೈತ್ರಾ ಮಾರುತಿ ನಾಯಿಕ ಸಾಬೀತುಪಡಿಸಿದ್ದಾಳೆ ಎಂದು ಶಾಲೆಯ ಹಿರಿಯ ಮುಖ್ಯೋಪಾಧ್ಯಯರಾದ ಬಸವರಾಜ ಸಸಾಲಟ್ಟಿಯವರು ಈ ವಿದ್ಯಾರ್ಥಿನಿಗೆ ಸತ್ಕರಿಸಿ ಮಾತನಾಡುತ್ತ . ಆರ್ಥಿಕ ಮುಗ್ಗಟ್ಟು ನಡುವೆಯೂ ಛಲಬಿಡದೆ ಪರಿಶ್ರಮದಿಂದ ಓದಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸರಕಾರಿ ಎಂ ಬಿ ಬಿ ಎಸ್ ಸೀಟ್ ಪಡೆದುಕೊಳ್ಳುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

            ಟ್ಯೂಷನ್ ಇಲ್ಲದೆ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠ ಕರಗತ ಮಾಡಿಕೊಂಡು  ಕುಮಾರಿ ಚೈತ್ರಾ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದು, 1 ರಿಂದ 7ನೇ ತರಗತಿವರೆಗೆ ಬಡಿಗಡವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಕಠಿಣ ಪರಿಶ್ರಮ ಮತ್ತು ಕುಟುಂಬದವರ ಅಚಲ ಬೆಂಬಲದಿಂದ ಕುಮಾರಿ ಚೈತ್ರಾ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಇಂದು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಸರಕಾರಿ ವೈದ್ಯಕೀಯ ಎಂ ಬಿ ಬಿ ಎಸ್ ಸೀಟ್ ಗಿಟ್ಟಿಸಿಕೊಂಡಿದ್ದು, ಗ್ರಾಮೀಣ ಕ್ಷೇತ್ರದ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ, ಗೌರವಿಸಿ, ಅವರ ಉನ್ನತ ಶಿಕ್ಷಣ ಹಾಗೂ ಉಜ್ವಲ ಭವಿಷ್ಯದ ಕನಸುಗಳಿಗೆ  ಬಡಿಗಡವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾ ಆಸರೆಯಾಗಿ ನಿಲ್ಲಲಿದೆ.

             ಕುಮಾರಿ ಚೈತ್ರಾ ಉತ್ತಮ ವೈದ್ಯೆಯಾಗಿ ಬೆಳೆದು ಸಮಾಜದ, ವಿಶೇಷವಾಗಿ ಬಡವರ ಸೇವೆ ಮಾಡುವಂತಾಗಲಿ. ಮುಂದಿನ ವೈದ್ಯಕೀಯ ಶಿಕ್ಷಣದ ಪಯಣ ಯಶಸ್ವಿಯಾಗಲಿ ಎಂಬುದು ನನ್ನ ಹೃದಯಪೂರ್ವಕ ಹಾರೈಕೆ ಹಾಗೂ ಆಶೀರ್ವಾದ ಎಂದೂ ಇವರ ಈ ಯಶೋಗಾಥೆಯು ವೈದ್ಯರಾಗುವ ಕನಸು ಕಾಣುವ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ದೊಡ್ಡ ಸ್ಪೂರ್ತಿಯಾಗಲಿ ಎಂದು ಶಾಲೆಯ ಹಿರಿಯ ಮುಖ್ಯೋಪಾಧ್ಯಯರು ಹಾಗೂ ಶ್ರೀಮತಿ ಆರ್ ಎಸ್ ದಡ್ಡಿಕಾರ,   ಎನ್ ಎಲ್ ಶಿಂತ್ರಿ,   ಗೀತಾ ಕೊಂಕಣಿ, ಕಾವೇರಿ ವಗ್ಗರ ಶಾಲೆಯ ಸಿಬ್ಬಂದಿ ವರ್ಗದವರು ಕುಮಾರಿ ಚೈತ್ರಾಳಿಗೆ ಸನ್ಮಾನ ಮಾಡುವುದರ ಮೂಲಕ ಸತ್ಕರಿಸಿದರು. 


ಸುದ್ದಿ ಓದಿ