ಬೆಳಗಾವಿ

ಕೆಎಲ್‌ಇ ಹೇಲ್ತ್‌- ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ ಕಣ್ಣಿನ ಆರೋಗ್ಯ ಕುರಿತು ಜಾಗೃತಿ

ಕೆಎಲ್‌ಇ ಹೇಲ್ತ್‌- ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ  ಕಣ್ಣಿನ ಆರೋಗ್ಯ ಕುರಿತು ಜಾಗೃತಿ

ಲೋಕದರ್ಶನ ವರದಿ  

        ಬೆಳಗಾವಿ 29 : ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಗುರುವಾರ 29ನೆ ಅಕ್ಟೋಬರ್ 2026 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ಕಣ್ಣಿನ ಆರೋಗ್ಯ ಕುರಿತು ನೇರ ಫೋನ್‌-ಇನ್ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  

          ಕಾರ್ಯಕ್ರಮದಲ್ಲಿ ಕೆಎಲ್‌ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ನೇತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮಕ್ಕಳ ನೇತ್ರ ವಿಜ್ಞಾನ ಮತ್ತು ಮೆದುಳಿನ ದೃಷ್ಟಿ ಸಂಸ್ಕರಣಾ ದೋಷ ತಜ್ಞ ವೈದ್ಯರಾದ ಡಾ. ಸ್ಮಿತಾ ಪ್ರಭು ಅವರು ಭಾಗವಹಿಸಿ ಕಣ್ಣಿನ ಆರೋಗ್ಯ ಕುರಿತು ಪ್ರಶ್ನೋತ್ತರ ಮೂಲಕ ಜಾರ್ಗತಿ ಮೂಡಿಸಿದರು. 

            ಮನುಷ್ಯನ ದೇಹದ ಪ್ರಮುಖ ಅಂಗಗಳಲ್ಲಿ ನಮ್ಮ ಎರಡು ಕಣ್ಣುಗಳೂ ಒಂದು, ಬೆಳಿಗ್ಗೆ ಹಾಸಿಗೆಯಿಂದ ಮೇಲಿಂದ ತಕ್ಷಣದಿಂದ ಹಿಡಿದು ರಾತ್ರಿ ಮಲಗುವವರೆಗೂ ಕೂಡ ಕಣ್ಣುಗಳ ಕೇಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ, ನಾವು ನಮ್ಮ ಆರೋಗ್ಯವನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತೇವೆ, ಅಷ್ಟೇ ಕಾಳಜಿಯನ್ನು ನಮ್ಮ ಕಣ್ಣುಗಳಿಗೂ ಕೂಡ ಕೋಡಬೇಕಾಗುತ್ತದೆ ಎಂದರು. 

ಇಂದು ನಾವು ನಮ್ಮ ಕಣ್ಣುಗಳಿಗೆ ಹೆಚ್ಚು ಕೇಲಸ ನೀಡುತ್ತಿದ್ದೇವೆ,  

        ಮೊಬೈಲನ್ನಯ ಅತಿಯಾಗಿ ನೋಡುತ್ತಿರುವುದು, ಮಲಗಿ ಕತ್ತಲಲ್ಲಿ ಮೊಬೈಲ ಬೇಳಲಕಿನಲ್ಲಿ ನೋಡುವುದು, ನಿರಂತರ ಟಿವಿ ವೀಕ್ಷಣೆ ಮತ್ತು ಅತಿಯಾದ ಮೊಬೈಲ್‌-ಕಂಪ್ಯೂಟರ ಗೇಮ್‌ಗಳ ಗೀಳು ಇವು ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತವೆ, ಆದ್ದರಿಂದ ಕಣ್ಣುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿಕೊಳ್ಳದೇ, ಸರಿಯಾದ ಆರೈಕೆ ಮಾಡುವುದು ಮುಖ್ಯ ಎಂದು ಹೇಳಿದರು. 

        ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು ಹಾಗೂ  ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಲಭ್ಯವಿರುವ ನೇತ್ರ ಚಿಕಿತ್ಸೆ ಮತ್ತು ಆಸ್ಪತ್ರೆಯಲ್ಲಿನ ಸೇವೆ ಸೌಲಭ್ಯಗಳ ಕುರಿತು ಕೇಳುಗರಿಗೆ ಮಾಹಿತಿ ಹಂಚಿಕೊಂಡರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್ ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು. 


ಸುದ್ದಿ ಓದಿ