ಬೆಳಗಾವಿ

ವಿ.ಪ ಚುನಾವಣೆ ಗೆಲುವಿಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಆಚರಣೆ

ವಿ.ಪ ಚುನಾವಣೆ ಗೆಲುವಿಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಆಚರಣೆ



           ಘಟಪ್ರಭಾ 29 : ರಾಜ್ಯದ  ವಿಧಾನ ಪರಿಷತ್ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ ಎಲ್ಲಾ ಕಡೆ ಗೆ ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಜಯ ಸಾಧಿಸಿದ ಬಿಜೆಪಿ ಮತ್ತು ಎನ್ ಡಿ ಎ ಅಭ್ಯರ್ಥಿಗಳ ಗೆಲುವಿಗೆ ಪಟ್ಟಣದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು  ಗುರುವಾರ ದಿ, 29-10-2026 ರಂದು ವಿಜಯೋತ್ಸವ ಆಚರಣೆ ಮಾಡಿ ಪರಸ್ಪರ ಸಿಹಿ ಹಂಚಿ ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು.

           ಹಿರಿಯ ಬಿಜೆಪಿ ನಾಯಕರಾದ ಸುರೇಶ್ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀಕಾಂತ ವಿ ಮಹಾಜನ, ಗೋಕಾಕ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ರಜಪೂತ, ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಶ್ರೀಕಾಂತ ಬಿ ಕುಲಕರ್ಣಿ, ಆನಂದ ದೇಶಪಾಂಡೆ,

            ಹರೀಶ್ ಕಾಳೆ, ಬಸವರಾಜ ಬೆಳ್ಳಣ್ಣವರ, ಈಶ್ವರ ಚೌಗಲಾ, ಪ್ರಕಾಶ್ ಕುಲಕರ್ಣಿ, ಮುರಳೀಧರ ಜತ್ತಿ, ಶಂಕರ ವಾಘ, ಮಹಾದೇವ ಬಡೋದೆ, ಭೂಕಾಂತ ಬನನನ್ನವರ,  ಸುಭಾಷ್ ಗಾಯಕ್ವಾಡ್, ವಿಜಯಕುಮಾರ್ ಪಾಟೀಲ,  ಚಿರಾಕಲಿಶಾ ಮಕಾನದಾರ, ಆದಪ್ಪಾ ಮಗದುಮ್, ಕೆ ಪಿ ಕಳ್ಳೀಮಠ, ದೀಪಕ ಬುಲಬುಲೆ ಸೇರಿದಂತೆ ಹಲವಾರು ಕಾರಯಕರು ವಿಜಯ ಘೋಷಣೆ ಹಾಕಿದರು. 


ಸುದ್ದಿ ಓದಿ