ರಾಜ್ಯಮಟ್ಟದ ಚಕ್ರ ಎಸೆತ ಸ್ಪರ್ಧೆಗೆ ಹನಮಂತ ದೊಡಮನಿ ಆಯ್ಕೆ
ಲೋಕದರ್ಶನ ವರದಿ
ಮುಧೋಳ: ಅ. 29: ತಾಲೂಕಿನ ಕೆ.ಪಿ.ಎಸ್. ಪಿಎಂ ಶ್ರೀ ಸೋರಗಾಂವ ಪ್ರೌಢಶಾಲೆಯ ವಿದ್ಯಾರ್ಥಿ ಹನಮಂತ ದೊಡಮನಿ, ಮಂಗಳವಾರ ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14ಹಿ17 ವರ್ಷ ವಯೋಮಾನದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಯನ್ನು ಗುರುತಿಸಿ, ಶಾಲೆಯ ಪ್ರಾರ್ಥನಾ ಸಮಯದಲ್ಲಿ ಹನಮಂತ ದೊಡಮನಿ ಹಾಗೂ ಆತನಿಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ಎಸ್.ಎಸ್. ಜಿರಗಾಳ ಮತ್ತು ಬಿ.ಡಿ. ದೊಡಮನಿ ಅವರನ್ನು ಶಾಲೆಯ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಬಿ.ಆರ್. ಶಿರೂರ, ವಿದ್ಯಾರ್ಥಿಗಳು ಶಾಲೆಯಲ್ಲಿ ಲಭ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಸಮರ್ಕವಾಗಿ ಬಳಸಿಕೊಂಡು, ತಮಗೆ ಆಸಕ್ತಿಯಿರುವ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿರಂತರ ತರಬೇತಿ ಪಡೆಯಬೇಕು. ಆಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಕ್ರೀಡೆಯಿಲ್ಲದ ಜೀವನ ಕೀಟ ತಿಂದ ಮರದಂತೆ ಎಂದು ಹೇಳಿದರು.
ಸರ್ಕಾರವು ವಿವಿಧ ಯೋಜನೆಗಳಡಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಸವಾಂರ್ಗೀಣ ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಕೆ. ಅಮ್ಮಣಗಿ, ವಿ.ಜಿ. ಮಲಕನ್ನವರ, ವಿ.ಎಚ್. ಗೌಡರ, ಆರ್.ಎಂ. ಡೊಂಬರ, ಡಿ.ಎಸ್. ಪೂಜಾರಿ, ಪರಶುರಾಮ ಜೋಗಿ, ರಾಘವೇಂದ್ರ ನೀಲಣ್ಣವರ,ಈರಯ್ಯ ನಂದೇಗೊಳ, ಅಬ್ದುಲ್ ಹುನ್ನೂರ ಹಾಗೂ ಮಂಜುನಾಥ ಹಕ್ಕೇನವರ ಉಪಸ್ಥಿತರಿದ್ದು, ಸಾಧಕ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸಿದರು.