ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ
ಲೋಕದರ್ಶನ ವರದಿ
ಗದಗ 29: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತು ್ತಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಘಟಕಗದಗ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರುಗಳ ಆಶ್ರಯದಲ್ಲಿ ಬುಧವಾರ ( ಅಕ್ಟೋಬರ್ 28 ರಂದು) ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗದಗ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.
ಡಾ. ಅರುಂಧತಿ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹೆಚ್.ಐ.ವಿ. ಏಡ್ಸ್ ಕೋವಿಡ್ನಷ್ಟು ಭಯಾನಕ ಇಲ್ಲ. ಹಾಗೂ ಇದನ್ನು ಓಷೊಧಪಚಾರವನ್ನು ತೆಗೆದುಕೊಂಡು ಜೀವನಾವಧಿಯನ್ನು ಹೆಚ್ಚಿಗೆ ಮಾಡಬಹುದು ಎಂದು ತಿಳಿಸಿದರು. ಹಾಗೂ ರಕ್ತದಾನದ ಮಹತ್ವವನ್ನು ತಿಳಿಸುತ್ತಾ 18 ವರ್ಷ ತುಂಬಿದವರು,
ಹಿಮೋಗ್ಲೋಬಿನ್ ಪ್ರಮಾಣ 12.5 ಮಿ.ಗ್ರಾಇರುವವರು ಹಾಗೂ 45 ಕೆ.ಜಿ.ಕ್ಕಿಂತ ಹೆಚ್ಚಿಗೆ ತೂಕ ಉಳ್ಳವರು, ಯಾರ ಬೇಕಾದರೂರಕ್ತದಾನ ಮಾಡಬಹುದು ಹಾಗೂ ರಕ್ತದಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೊಸ ರಕ್ತ ಉತ್ಪಾದನೆಯಾಗಲು ಪ್ರೇರೆಪಣೆ ಕೊಡುತ್ತದೆ. ಮತ್ತು ಕ್ಯಾನ್ಸರ್ ಮತ್ತು ಹೃದಯದ ಖಾಯಿಲೆಯನ್ನು ತಡೆಗಟ್ಟಬಹುದು ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಬಾರಿಯಾದರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಎಮ್.ಎಸ್. ಧಾರವಾಡ ಮಾತನಾಡಿ ಸ್ಪರ್ಧಾಳುಗಳು ಸ್ಪೂರ್ತಿಯಿಂದ ಭಾಗವಹಿಸಿ ಕಾಲೇಜಿಗೆಕೀರ್ತಿತರಬೇಕೆಂದು ಹೇಳಿದರು. ವಿದ್ಯಾರ್ಥಿಜೀವನ ಅಮೂಲ್ಯವಾದದ್ದು, ವಿದ್ಯಾರ್ಥಿಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಗುರಿ ಸಾಧಿಸಲು ಹಾಗೂ ವಿದ್ಯಾರ್ಥಿಗಳು ಆರೋಗ್ಯದಿಂದ ಇರಲು ತಿಳಿಸಿದರು.
ವೇದಿಕೆಯಲ್ಲಿ ಮೌಲ್ಯ ಮಾಪಕರಾದ ಡಿ.ಡಿ.ಪಿ.ಐ ಕಛೇರಿಯ ವಿಷಯ ನೀರಿಕ್ಷಣಾಧಿಕಾರಿಗಳಾದ ಯರಗುಡಿರವರು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಗೀಳುನಿಂದ ಹೊರಬಂದು ಸಂಸ್ಕಾರಯುತ ಶಿಕ್ಷಣ ಪಡೆದು, ನೀತಿವಂತರಾಗಿ ಬಾಳಬೇಕೆಂದು ಹೇಳಿದರು. ಸ್ಪರ್ಧೆಯಲ್ಲಿ ಜಿಲ್ಲೆಯ 39 ಪ್ರೌಢಶಾಲೆಯ ತಂಡಗಳು ಭಾಗವಹಿಸಿದ್ದರು.
ಬಸವರಾಜ ಲಾಲಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರಸಪ್ರಶ್ನೆ ಸ್ಪರ್ಧೆಯ ನಿಯಮಗಳು ಹಾಗೂ ಉದ್ದೇಶಗಳನ್ನು ವಿವರಿಸಿ, ಯುವಜನರಲ್ಲಿರಕ್ತದಾನದ ಹಾಗು ಹೆಚ್.ಐ.ವಿ. ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಈ ರಸಪ್ರಶ್ನೆ ಸ್ಪರ್ಧೆಯಉದ್ದೇಶವಾಗಿದ್ದು, ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಸೇವೆ, ಸೌಲಭ್ಯ, ಕಳಂಕ ಮತ್ತುತಾರತಮ್ಯ ಹಾಗೂ ರಾಷ್ರೀಯ ಸಹಾಯವಾಣಿ, ಹೆಚ್.ಐ.ವಿ. ಏಡ್ಸ್ಕಾಯ್ದೆ 2017 ಹಾಗೂ ರಕ್ತದಾನದ ಬಗ್ಗೆ ರಸಪ್ರಶ್ನೆ ಒಳಗೊಂಡಿರುತ್ತದೆ ಎಂದು ತಿಳಿಸಿದರು.