ವಿಜಯಪುರ

ವಿಜಯಪುರದಲ್ಲಿ ಬಹುಭಾಷಾ ಶಬ್ದಕೋಶ ವಿಚಾರ ಸಂಕಿರಣ: ಪಾಲಿ-ಕನ್ನಡ ಶಬ್ದಕೋಶದ ಐದು ಸಂಪುಟಗಳ ಬಿಡುಗಡೆ

ವಿಜಯಪುರದಲ್ಲಿ ಬಹುಭಾಷಾ ಶಬ್ದಕೋಶ ವಿಚಾರ ಸಂಕಿರಣ: ಪಾಲಿ-ಕನ್ನಡ ಶಬ್ದಕೋಶದ ಐದು ಸಂಪುಟಗಳ ಬಿಡುಗಡೆ
Seminar on Multilingual Dictionaries in Vijayapura: Release of Five Volumes of a Pali-Kannada Dictio

ಲೋಕದರ್ಶನ ವರದಿ 

                ವಿಜಯಪುರ 29:  “ಬಹುಭಾಷಾ ಶಬ್ದಕೋಶ ವಿಚಾರ ಸಂಕಿರಣವು ಭಾಷಾ ಸ್ವಾಮಿತ್ವ ಮತ್ತು ಸಂವಹನ ಶಕ್ತಿ ಹೆಚ್ಚಿಸುತ್ತದೆ”. ಪಾಲಿ ಭಾಷೆಯು ಪ್ರಾಂತಿಯ ಭಾಷೆಯಾಗಿದ್ದು ವಿವಿಧ ಭಾಷೆಗಳನ್ನು ಸಂಪರ್ಕಿಸಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಪಾಲಿ ಇನ್ಸಿಟಿಟ್ಯೂಟ್ ಈ ಕಾರ‌್ಯ ಮಾಡುತ್ತಿದ್ದು ಭಾಷಾ ಸ್ವಾಮಿತ್ವ ಮತ್ತು ಸಂವಹನ ಶಕ್ತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆಂದು ಬಹುಭಾಷಾ ಶಬ್ದಕೋಶ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ 5 ಗ್ರಂಥಗಳನ್ನು ಬಿಡುಗಡೆ ಮಾಡಿ ಬಿ.ಎಲ್‌.ಡಿ.ಇ. ಸಂಸ್ಥೆಯ ನಿರ್ದೇಶಕರಾದ ಶ್ರೀ ಸಂ.ಗು.ಸಜ್ಜನ ಕಾರ‌್ಯಕ್ರಮ ಉದ್ಘಾಟಿಸಿ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ, ವಿಜಯಪುರ ಹಮ್ಮಿಕೊಂಡ ಕಾರ‌್ಯಕ್ರಮದಲ್ಲಿ ಮಾತನಾಡಿದರು.                    ಅತಿಥಿ, ಅಧ್ಯಕ್ಷರ ಪರಿಚಯದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ನಿರ್ದೇಶಕರು ಪಾಲಿ ಇನ್ಸ್‌ಟಿಟ್ಯೂಟ್ ಕಲಬುರಗಿ ಅವರು ಪಾಲಿ ಭಾಷೆಯ ಇತಿಹಾಸ ಅದರ ಮಹತ್ವವನ್ನು ಅನುಷ್ಠಾನಗೊಳಿಸುವ ರೀತಿಯನ್ನು ವಿವಿಧ ದೇಶಗಳ ವಿದ್ವಾಂಸರು ಸೀಮಾತೀತ ಜ್ಞಾನದ ಮೂಲಕ ತಮ್ಮ ಆ ಭಾಷೆಯ ವಿಶಾಲತೆಯನ್ನು ಎತ್ತಿ ತೋರಿಸಿದವರ ಕುರಿತು ವಿಶ್ಲೇಷಿಸಿದರು.  

                   ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆಯನ್ನು ಡಾ. ಎಸ್‌.ಪದ್ಮಪ್ರಸಾದ ಅವರು ಪಾಕೃತ ಶಬ್ದಕೋಶಗಳ ಕೊಳು-ಕೊಡುಗೆ ಕುರಿತು ಡಾ. ಎನ್‌.ಶಿವರಾಜಪ್ಪ ಸಂಸ್ಕೃತ ಶಬ್ದಕೋಶಗಳ ಕೊಳು-ಕೊಡುಗೆ, ಡಾ. ಎಸ್‌.ಚಂದ್ರಮೋಹನ ಪಾಲಿ ಶಬ್ದಗಳ ಕೊಳು-ಕೊಡುಗೆ, ಡಾ. ಎಂ.ನಾಗರಾಜ ಕನ್ನಡ ಶಬ್ದಕೋಶಗಳ ಕೊಳು-ಕೊಡುಗೆ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪ್ರೊ. ಜಿ.ಆರ್‌.ಕುಲಕರ್ಣಿ ನಿವೃತ್ತ ಪ್ರಾಚಾರ್ಯರು ವಹಿಸಿದ್ದರು. ಸಮಾರಂಭದ ವೇದಿಕೆಯ ಮೇಲೆ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮತ್ತು ಡಾ. ಎಂ.ಎಸ್‌.ಮದಭಾವಿಯವರು ಇದ್ದರು. 

                  ಸಮಾರೋಪ ಸಮಾರಂಭದಲ್ಲಿ ಪಾಲಿ-ಕನ್ನಡ ಶಬ್ದಕೋಶಗಳ ಐದು ಸಂಪುಟಗಳನ್ನು ಕಾಲೇಜಿನ ಪ್ರಾಧ್ಯಾಪಕರಿಗೆ ಮತ್ತು ಸಂಸ್ಥೆಗಳಿಗೆ ವಿತರಣೆ ಮಾಡಲಾಯಿತು. ಪ್ರಾರಂಭದಲ್ಲಿ ಬಿ.ಆರ್‌.ಬನಸೋಡೆ ಅವರು ವಚನ ಗಾಯನ ಮಾಡಿದರು. ಡಾ. ಎಂ.ಬಿ.ಕಟ್ಟಿ ಕಾರ‌್ಯಕ್ರಮ ನಿರೂಪಿಸಿದರು. ಡಾ. ವಿ.ಡಿ.ಐಹೊಳ್ಳಿ ಮತ್ತು ಡಾ. ಸುಭಾಸ ಕನ್ನೂರ, ಡಾ. ಗೀರೀಶ ರೆಡ್ಡಿ ಅವರು ಪ್ರಾಧ್ಯಾಪಕರ ಗ್ರಂಥ ವಿತರಣೆ ಸಲುವಾಗಿ ಕ್ರಮವಾಗಿ ಅವರ ಹೆಸರುಗಳನ್ನು ಓದಿದ ಮೇಲೆ ಸಮಕುಲಾಧಿಪತಿ ಪ್ರೊ. ವೈ.ಎಂ.ಜಯರಾಜ ಗ್ರಂಥಗಳನ್ನು ವಿತರಿಸಿದರು. ಕೊನೆಯದಾಗಿ ಅಭಿನಂದಿಸಿದರು. 


ಸುದ್ದಿ ಓದಿ