ಕೃಷಿ ಭೂಮಿ ಗೌರವಿಸಿ! ಧಾರ್ಮಿಕ ನಂಬಿಕೆಗಳನ್ನು ಪಾಲಿಸುವುದೇ ಸೀಗೆ ಹುಣ್ಣಿಮೆ: ಚಂದ್ರು
ಶಿಗ್ಗಾವಿ 26 : ಕೃಷಿ ಭೂಮಿಯನ್ನು ಗೌರವಿಸುವುದು, ಧಾರ್ಮಿಕ ನಂಬಿಕೆಗಳನ್ನು ಪಾಲಿಸುವುದು ಹಾಗೂ ಪೂರ್ವಜರಿಂದ ನಡೆದುಕೊಂಡು ಬಂದಆಚರಣೆಗಳನ್ನು ಮುಂದುವರಿಸುವುದು ಸೀಗೆ ಹುಣ್ಣಿಮೆ ಹಬ್ಬದ ಪ್ರಮುಖ ಉದ್ದೇಶ ಎಂದು ರೈತ ಮುಖಂಡ ಚಂದ್ರು ಕೊಡ್ಲಿವಾಡ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ಹೊಲದಲ್ಲಿ ಸೀಗೆ ಹುಣ್ಣಿಮೆ ಹಬ್ಬದ ಅಂಗವಾಗಿ ಮನೆಗಳಲ್ಲಿ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿಕೊಂಡು ಹೋಗಿ ಹೊಲದಲ್ಲಿ ಪಾಂಡವರನ್ನು ನಿರ್ಮಿಸಿ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಮನೆಯ ಮಂದಿಯಲ್ಲ ಜೊತೆಗೆ ತಮ್ಮ ಸಂಬಂಧಿಕರನ್ನು ಕರೆಯಿಸಿ ರೊಟ್ಟಿ, ಕರ್ಚಿಕಾಯಿ, ಸುಳ್ಳಿ ಹೋಳಿಗೆ, ಕರಿ ಚಟ್ಟಿ, ಉಂಡಗಡಬು ಸೇರಿದಂತೆ ತರಹೇವಾರಿ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಸಿದ್ದಪಡಿಸುವುದು. ಮನೆಯ ಮಹಿಳೆಯರು ಸಂಭ್ರಮದಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಕುಟುಂಬದ ಸದಸ್ಯರು ಹಾಗೂ ಬಂಧುಗಳೊಂದಿಗೆ ಹಂಚಿಕೊಂಡು ಸವಿಯುವುದು ಸೀಗೆ ಹುಣ್ಣಿಮೆಯ ವಿಶೇಷ. ಈ ಸಂದರ್ಭದಲ್ಲಿ ಚಂದ್ರು ಕೊಡ್ಲಿವಾಡ ಸೇರಿದಂತೆ ಕುಟುಂಬ ವರ್ಗದವರು ಉಪಸ್ಥಿತರಿದ್ದರು.