ಶಿಗ್ಗಾವ್

ಬಿಜೆಪಿಯ ಎಲ್ಲ ನಾಯಕರು ಒಂದಾಗುವದು ಒಳ್ಳೆಯ ಬೆಳವಣಿಗೆ: ಬೊಮ್ಮಾಯಿ

ಬಿಜೆಪಿಯ ಎಲ್ಲ ನಾಯಕರು ಒಂದಾಗುವದು ಒಳ್ಳೆಯ ಬೆಳವಣಿಗೆ: ಬೊಮ್ಮಾಯಿ

ಶಿಗ್ಗಾವಿ : ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಬಿಜೆಪಿಯ ನಾಯಕರು ಒಂದಾಗಬೇಕು ಅನ್ನುವ ಭಾವನೆ ಜನ ಸಾಮಾನ್ಯರಲ್ಲಿದೆ, ನಮ್ಮ ಕಾರ್ಯಕರ್ತರರಲ್ಲೂ ಇದೆ. ಆ ಕಾರಣಕ್ಕೆ ಎಲ್ಲರೂ ಕೂಡ ಒಂದಾಗಬೇಕು ಅನ್ನುವಂತ ಒಂದು ವಾತಾವರಣ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.  ಪಶ್ಚಿಮ ಪದವೀಧರ ಕ್ದೇತ್ರದ ಮತದಾನದ ಹಿನ್ನೆಲೆಯಲ್ಲಿ ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜಕಾರಣ ಅಂದಮೇಲೆ ಬದಲಾಗಿರುವಂತಹ ಪರಿಸ್ಥಿತಿಯನ್ನು, ಬದಲಾಗಿರುವಂತಹ ಸವಾಲುಗಳನ್ನು ಎದುರಿಸುವುದಕ್ಕೆ ಹಲವಾರು ರೀತಿಯಲ್ಲಿ ಬೆಳವಣಿಗೆ ಆಗುತ್ತದೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಮಾತ್ರ ಉಳಿದಿದೆ. ನಮ್ಮ ಎಲ್ಲಾ ನಾಯಕರು, ಜನಪ್ರತಿನಿಧಿಗಳು ಜನರ ಬಳಿಗೆ ಹೋದಾಗ, ಅವರು ಈ ಸರ್ಕಾರ ಕಿತ್ತೋಗಬೇಕು, ಈ ಸರ್ಕಾರ ಕಿತ್ತೋಗೋಕೆ ನೀವೆಲ್ಲಾ ಒಂದಾಗಬೇಕು ಅನ್ನುವಂತಹ ಭಾವನೆ ಜನಸಾಮಾನ್ಯರಲ್ಲಿದೆ, ನಮ್ಮ ಕಾರ್ಯಕರ್ತರಲ್ಲೂ ಇದೆ. ಆ ಕಾರಣಕ್ಕೆ ಎಲ್ಲರೂ ಕೂಡ ಒಂದಾಗಬೇಕು ಅನ್ನುವಂತ ಒಂದು ವಾತಾವರಣ ಮೂಡಿದೆ. ಆ ಕೆಲಸವನ್ನು ನಾವು ಮಾಡಿತ್ತೇವೆ ಎಂದು ಹೇಳಿದರು. ಸಂಕನೂರು ಹೆಚ್ಚಿನ ಲೀಡ್ ನಲ್ಲಿ ಗೆಲ್ಲುವ ವಿಶ್ವಾಸ : ಪಶ್ಚಿಮ ಪದವಿಧರ ಕ್ಷೆತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ. ಸಂಕನೂರು ಅವರು ಹಿಂದಿನಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಗ್ರಾಮೀಣ ಪ್ರದೇಶದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಮತ ಸಿಗುವ ನೀರೀಕ್ಷೆ ಇದೆ ಎಂದು ಹೇಳಿದರು. 


ಸುದ್ದಿ ಓದಿ