ಸಂಕನೂರ ಪರ ಮತ ಚಲಾಯಿಸಿದ : ಭರತ ಬೊಮ್ಮಾಯಿ
ಶಿಗ್ಗಾವಿ 23 : ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಪಶ್ಚಿಮ ಪಧವೀದರ ಚುನಾವಣೆ ಹಿನ್ನಲೆಯಲ್ಲಿ ಭಾಜಪ ಯುವ ಮುಖಂಡ ಭರತ ಬೊಮ್ಮಾಯಿ ಭಾಜಪ ಅಭ್ಯರ್ಥಿ ಎಸ್.ವ್ಹಿ. ಸಂಕನೂರ ಪರ ಮತ ಚಲಾವಣೆ ಮಾಡಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಅನಿಲ ಸಾತಣ್ಣವರ, ರೇಣುಕನಗೌಡ ಪಾಟೀಲ, ವಿವೇಕ ರಾಮಗೇರಿ, ಮಂಜುನಾಥ ಬ್ಯಾಹಟ್ಟಿ, ಉಮೇಶಗೌಡ ಪಾಟೀಲ, ಮಾಲತೇಶ ಯಲಿಗಾರ, ಸಚಿನ ಮಡಿವಾಳರ, ಕಾಶೀನಾಥ ಕಳ್ಳಿಮನಿ, ರೂಪಾ ಬನ್ನಿಕೊಪ್ಪ, ಸಂಜನಾ ರಾಯ್ಕರ, ಸಂಗೀತಾ ವಾಲ್ಮೀಕಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.