ಶಿಗ್ಗಾವ್

ಕಾಂಗ್ರೆಸ್‌ ಅಭ್ಯರ್ಥಿಮೋಹನ ಲಿಂಬಿಕಾಯಿನೂರಕ್ಕೆ ನೂರರಷ್ಟು ಗೆಲ್ಲುವುದು ಶತಸಿದ್ದ : ಶಾಸಕ ಪಠಾಣ

ಕಾಂಗ್ರೆಸ್‌ ಅಭ್ಯರ್ಥಿಮೋಹನ ಲಿಂಬಿಕಾಯಿನೂರಕ್ಕೆ ನೂರರಷ್ಟು ಗೆಲ್ಲುವುದು ಶತಸಿದ್ದ : ಶಾಸಕ ಪಠಾಣ

ಶಿಗ್ಗಾವಿ : ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯ ನಿಮಿತ್ತ ಶಿಗ್ಗಾವಿ ಕ್ಷೇತ್ರದ ತಹಶಿಲ್ದಾರ ಕಾರ್ಯಾಲಯದಲ್ಲಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಮತ ಚಲಾವಣೆ ಮಾಡಿದರು.   ನಂತರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಖ್ಯಾತ ನ್ಯಾಯವಾದಿಮೋಹನ ಲಿಂಬಿಕಾಯಿನೂರಕ್ಕೆ ನೂರರಷ್ಟು ಗೆಲ್ಲುವುದು ಶತಸಿದ್ದ ಏಕೆಂದರೆ ನಿರುದ್ಯೋಗ ಯುವಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೇಸ ಸರಕಾರಕ್ಕೆ ಸಲ್ಲುತ್ತದೆ ಅಲ್ಲದೇ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿರುವ ಕಾರಣ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುತ್ತಾರೆ ಎಂದರು.   ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಪ್ರೇಮಾ ಪಾಟೀಲ, ರಾಜು ಕುನ್ನೂರ, ವಸಂತಾ ಬಾಗೂರ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಬಸವರಾಜ ರಾಗಿ, ಸಲೀಂ ಪರೋಖಿ, ಚಂದ್ರು ಕೊಡ್ಲಿವಾಡ, ಲಕ್ಷ್ಮೀ ಕಟ್ಟಿಮನಿ, ಮಂಜುನಾಥ ಮಣ್ಣಣ್ಣವರ, ಅಶೋಕ ಕಬನೂರ, ಸಾಧೀಕ ಮಲ್ಲೂರ, ಸಾಧೀಕ ಸವಣೂರ, ಹಜರತಲಿ ಚೂಡಿಗಾರ, ಮಲ್ಲಮ್ಮ ಸೋಮನಕಟ್ಟ, ಅನಿಲ ಭದ್ರಾಪೂರ, ಸೋಮನಗೌಡ ಪಾಟೀಲ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ