ದಸರಾದಲ್ಲಿ ಜನಮನ ಸೆಳೆದ ದೊಡ್ಡಾಟ ಗೀತೆ ಪ್ರದರ್ಶನ
ಶಿಗ್ಗಾವಿ 18: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಆಯೋಜಿಸಿದ್ದ ಬಹುರೂಪಿ ಕವಿಗೋಷ್ಠಿ-2026 ರ ಕಾವ್ಯಗೋಷ್ಟಿ ಕಾರ್ಯಕ್ರಮದಲ್ಲಿ ಶಿಗ್ಗಾವಿ ತಾಲೂಕಿನ ಕ್ಯಾಲಕೊಂಡ ಗ್ರಾಮದ ದೊಡ್ಡಾಟ ಜಾನಪದ ತಜ್ಞ ಕಲಾವಿದ ಬಸವರಾಜ ಶಿಗ್ಗಾಂವ ಅವರು ದೊಡ್ಡಾಟ ಗೀತೆಗಳ ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು.
ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ. ಶ್ರೀ ಸಭಾಂಗಣದಲ್ಲಿ ತಮ್ಮ ಕಲಾ ಪ್ರದರ್ಶನದ ಮೂಲಕ ಉತ್ತರ ಕರ್ನಾಟಕದ ಶ್ರೀಮಂತ ಜನಪದ ಕಲಾಪರಂಪರೆಯನ್ನು ಪರಿಚಯಿಸಿದರು. ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಕ್ಯಾಲಕೊಂಡ ಗ್ರಾಮದ ಕಲಾವಿದರಿಗೆ ಅವಕಾಶ ದೊರೆತಿರುವುದು ಶಿಗ್ಗಾವಿ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.