ಶಿಗ್ಗಾವ್

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ! ಸರ್ಕಾರ ಇವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಸಚಿವ ಜೋಶಿ

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ! ಸರ್ಕಾರ ಇವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಸಚಿವ ಜೋಶಿ
Farmers are the backbone of the nation's economy! There is no question of the government neglecting

ಶಿಗ್ಗಾವಿ   18: ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಸರ್ಕಾರ ಇವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ಎರೆಡೇ ದಿನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಜಂಟಿ ಸಮಿತಿ ರಚಿಸಿದ್ದು, ನಾಲ್ಕೈದು ದಿನದಲ್ಲೇ ಅಧ್ಯಯನ ಆರಂಭಿಸಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.       

ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ರೈತರು ಹೋರಾಟದಿಂದ ಹಿಂದೆ ಸರಿಯಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತ ನಾಯಕರು ಮತ್ತೆ ಚರ್ಚೆಗೆ ಬಂದರೆ ಮಾತುಕತೆಗೆ ನಾವು ಸಿದ್ಧರಿದ್ದೇವೆ.

ರೈತ ಪ್ರಮುಖರು ಐದಾರು ಜನ ಬಂದರೆ ಚರ್ಚೆಯಲ್ಲಿ ಗೊಂದಲ ಏರ​‍್ಡದೆ ಸುಲಲಿತವಾಗುತ್ತದೆ. ಹಾಗಾಗಿ ರೈತ ಪ್ರಮುಖರು ಯಾವತ್ತೂ ಬಂದರೂ ಮಾತುಕತೆಗೆ ಕೇಂದ್ರ ಮತ್ತೆ ಸಿದ್ಧವಿದೆ ಎಂದು ಪುನರುಚ್ಚರಿಸಿದರು.   ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವತ್ತೂ ರೈತರ ಪರವಿದೆ. ರೈತರು, ದುರ್ಬಲ ವರ್ಗದ ಪರ ಯಾವತ್ತೂ  ಇದೆ.  

ರೈತರು ನಮ್ಮ ಆರ್ಥಿಕತೆಯ ಮೂಲವಾಗಿದ್ದು, ಅವರನ್ನು ಕಡೆಗಣಿಸುವ ಮಾತೇ ಇಲ್ಲ. ಕೇಂದ್ರ ಸರ್ಕಾರ ನೇಮಿಸಿದ ಪ್ರೊ.ರಮೇಶಚಂದ್ ಸಾರಥ್ಯದ ಸಮಿತಿ ಶೀಘ್ರದಲ್ಲೇ ಖಂಕ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಮಗ್ರ ಅವಲೋಕನ, ಅಧ್ಯಯನ ನಡೆಸಲಿದೆ ಎಂದರು. ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಿದ್ದೇ ನಾವು:ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಿದ್ದೇ ಮೋದಿ ಅವರು ಎಂದು ಸ್ವತಃ ಸ್ವಾಮಿನಾಥನ್ ಅವರೇ ಟ್ವೀಟ್ ಮಾಡಿದ್ದಾರೆ. 2014ರ ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಎಸ್‌ಪಿ, ಬೆಂಬಲ ಬೆಲೆಗೆ ಖರೀದಿ ವೃದ್ಧಿಸಿದೆ. ಭತ್ತ ಮತ್ತು ಗೋದಿಯನ್ನು ರೈತರು ಬೆಳೆದಷ್ಟೂ ಖರೀದಿಸುತ್ತಿದ್ದೇವೆ ಎಂದರು . 




ಸುದ್ದಿ ಓದಿ