ಕಾರವಾರ

ದಾಂಡೇಲಿ ರಾಮಲೀಲೆ, ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್‌ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ

ದಾಂಡೇಲಿ ರಾಮಲೀಲೆ, ಜಾತ್ರೆಗೆ ಪೊಲೀಸ್ ಬಿಗಿ ಬಂದೋಬಸ್ತ್‌ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ

      

ದಾಂಡೇಲಿ 17 : ಬಾಂಗೂರ ನಗರ ಡಿಲಕ್ಸ್‌ ಸಭಾ ಭವನದಲ್ಲಿ ನಡೆದ ಪತ್ರಿಕಾ ಗೊಷ್ಠಿಯಲ್ಲಿ ಅಕ್ಟೋಬರ 20 ರಂದು ನಡೆಯುವ ರಾಮಲೀಲಾ ಹಾಗೂ ದಾಂಡೇಲಪ್ಪ ಜಾತ್ರೆ ಕುರಿತಂತೆ ಮಾತನಾಡಿದ ಡಿ.ವಾಯ್‌.ಎಸ್‌.ಪಿ ಬಿ. ಗೀರೀಶ್ ಅವರು ಈ ಕುರಿತಂತೆ ಇಲಾಖೆ ಶಾಂತಿ ಸುವ್ಯಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುತ್ತಿದ್ದು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು ಉತ್ಸವದ ಹಿನ್ನೆಲೆಯಲ್ಲಿ ದ್ವಿ ಚಕ್ರ ವಾಹನಗಳಿಗೆ ಕನ್ಯಾವಿದ್ಯಾಲಯದ ಮೈದಾನದಲ್ಲಿ ಹಾಗೂ ಕಾರು ಇನ್ನೀತರ ವಾಹನಗಳಿಗೆ  ಜನತಾ ವಿದ್ಯಾಲಯದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ  ಕಲ್ಪಿಸಲಾಗಿದೆ ಎಂದರು ಜಾತ್ರೆಯ ಹಿಂದಿನ ದಿನ ಸಂಜೆ 6 ಗಂಟೆಯಿಂದ ಜಾತ್ರ ಮುಗಿಯುವವರೆಗೂ ದಾಂಡೇಲಿಯಿಂದ ಹಳಿಯಾಳಕ್ಕೆ  ಹೋಗುವ ಮತ್ತು ಹಳಿಯಾಳದಿಂದ ದಾಂಡೇಲಿಗೆ ಬರುವ ಸಾರಿಗೆ ಬಸ್‌ಗಳ ಸಹಿತ ಎಲ್ಲ ವಾಹನಗಳಿಗೂ ಕರ್ಕಾ ಬರ್ಚಿ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಂಡಿರುತ್ತಿದ್ದು ಪೇಪರ ಮಿಲ್ಲಿಗೆ ಬರುವ ಕಚ್ಚಾ ವಸ್ತುಗಳನ್ನು ಹೇರಿಕೊಂಡು ಬರುವ ಟ್ರಕ್ ಗಳನ್ನು ಜಾತ್ರೆಯ ಮುನ್ನಾ ದಿನದಿಂದಲೇ ಕೆಸರೊಳ್ಳಿಯಲ್ಲಿ ಪಾಕಿಂಗ್ ಮಾಡಿಸಲಾಗುವದೆಂದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಅವರು ಮನೆಯಲ್ಲಿ ಯಾರಾದರೂ ಒಬ್ಬರು ಇರುವಂತೆ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಭರಣಗಳನ್ನು ಧರಿಸದಂತೆ ಕಿಸೆಗಳ್ಳರಿಂದ ಜಾಗರೂಕರಾಗಿರಲು ಕೇಳಿಕೊಂಡರು. ಸಿಪಿ.ಐ ಶಿವಾನಂದ ಅಂಬೀಗೇರ, ಪಿ.ಎಸ್‌.ಐ ಅಮೀನ ಅತ್ತಾರ ಅವರು ಸಾರ್ವಜನಿಕರ ಸಹಕಾರ ಕೋರಿದರು. ಕಾಗದ ಕಾರ್ಖಾನೆಯ ಸಾರ್ವಜನಿಕರ ಸಂಪರ್ಕಾಧಿಕಾರಿ ರಾಘವೇಂದ್ರ ಜೆ. ಆರ್‌. ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಕಾರ್ಯಕ್ರಮವನ್ನು ಸುಲಭವಾಗಿ ನೋಡುವಂತಾಗಲು ರಂಗನಾಥ ಸಭಾಭವನದ ಮುಂಬಾಗದಲ್ಲಿ ಎಲ್‌.ಇ.ಡಿ ಪರದೆಯ ಮೂಲಕ ಉತ್ಸವದ ನೇರ ಪ್ರಸಾರವನ್ನು ಮಾಡಲು ಕ್ರಮ ಕೈಗೊಳ್ಳಲಾಗಿದ ಎಂದರು. ಪಿ.ಎಸ್‌.ಐ ಗಳಾದ ಶಿವಾನಂದ ನಾವದಗಿ, ಮಂಜುಲಾ ರಾವೋಜಿ ಕಾಗದ ಕಾರ್ಖಾನೆಯ ಇನ್ನೀತರ ಅಧಿಕಾರಿಗಳು, ಭದ್ರತಾ ಅಧಿಕಾರಿಗಳಾದ ಕುಶಾಲಪ್ಪಾ, ಮತ್ತು ಎಸ್‌.ಜಿ ಪಾಟೀಲ್ ಉಪಸ್ಥಿತರಿದ್ದರು. 


ಸುದ್ದಿ ಓದಿ