ಅಂಕಲಿಯಲ್ಲಿ ಅಕ್ಟೋಬರ್ 25ರಂದು ಮರಾಠಾ ಸಮಾಜದ ಬೃಹತ್ ಸಮಾವೇಶ; ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಭವ್ಯ ನಾಗರಿಕ ಸನ್ಮಾನ
ಮಾಂಜರಿ 23 : ಚಿಕ್ಕೋಡಿ ತಾಲ್ಲೂಕಿನಲ್ಲಿ ಅತ್ಯಂತ ನಿರ್ಣಾಯಕ ಜನಸಂಖ್ಯೆ ಹೊಂದಿರುವ ಮರಾಠಾ ಸಮುದಾಯದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು, ಸಮಾಜಕ್ಕೆ ಸರಿಯಾದ ದಿಕ್ಕು ಮತ್ತು ದೆಸೆ ತೋರಿಸಲು ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಬೃಹತ್ ಮರಾಠಾ ಸಮಾಜದ ಸಮಾವೇಶವನ್ನು ಚಿಕ್ಕೋಡಿ ತಾಲುಕಿನ ಅಂಕಲಿ ಗ್ರಾಮದಲ್ಲಿ ಇದೇ ಬರುವ ಭಾನುವಾರ 25 ರಂದು ಬೆಳಿಗ್ಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಮರಾಠಾ ಸಮಾಜದ ಪ್ರಮುಖ ನಾಯಕರಾಗಿರುವ ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಎರಡನೇ ಬಾರಿಗೆ ಸಚಿವರಾಗಿ ಆಯ್ಕೆಗೊಂಡಿರುವುದಕ್ಕೆ ಸಮಾಜದ ವತಿಯಿಂದ ಇದೇ ವೇಳೆ ಭವ್ಯ ನಾಗರಿಕ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮರಾಠಾ ಮಹಾಸಂಘದ ಚಿಕ್ಕೋಡಿ ಘಟಕದ ಅಧ್ಯಕ್ಷ ಬಿ. ಆರ್. ಯಾದವ್ ತಿಳಿಸಿದ್ದಾರೆ. ಅವರು ಇಂದು ಅಂಕಲಿ ಗ್ರಾಮದ ಮರಾಠಾ ಸಮಾಜ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಈ ವಿಷಯದ ಮಾಹಿತಿ ನೀಡಿದರು. ಚಿಕ್ಕೋಡಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠಾ ಸಮುದಾಯಕ್ಕೆ ಸರಿಯಾದ ನಾಯಕತ್ವ, ದಿಕ್ಕು ಮತ್ತು ದೆಸೆ ನೀಡುವುದು. ಸಮಾಜದ ಮುಂದಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದು. ಮರಾಠಾ ಸಮುದಾಯದ ಕಲಿತ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಮತ್ತು ಸ್ವಯಂ ಉದ್ಯೋಗ ಹುಟ್ಟುಹಾಕಲು ವಿವಿಧ ಸರ್ಕಾರಿ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು ಸಮಾವೇಶದಲ್ಲಿ ಚಿಕ್ಕೋಡಿ ತಾಲ್ಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಮರಾಠಾ ಸಮಾಜದ ಯುವಕ-ಯುವತಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಸಚಿವ ಸಂತೋಷ ಲಾಡ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದ್ದು, ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬಿ. ಆರ್. ಯಾದವ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಾಮಾ ಯಾದವ್, ಅನಿಲ್ ಪಾಟೀಲ್, ಜಯರಾಜ್ ಹಲಗೇಕರ್, ಅಣ್ಣಾಸಾಹೇಬ್ ಪವಾರ್, ಬಾಳಾಸಾಹೇಬ್ ಪಾಟೀಲ್, ಅಜಯ್ ಸೂರ್ಯವಶಿ , ಡಾ. ಜೆ. ಬಿ. ಮಾನೆ, ವೀರ್‌ಸಿಂಗ್ ಘೋರೆ್ಡ ಸೇರಿದಂತೆ ಅನೇಕ ಗಣ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಸುದ್ದಿಗೋಷ್ಠಿಗೆ ಅಂಕಲಿ ಮರಾಠಾ ಸಮಾಜದ ನಾಯಕರಾದ ರಾವ್ ಸಾಹೇಬ್ ಮಾನೆ, ಪರಶುರಾಮ್ ಕೋಟಿವಾಲೆ, ರಂಜಿತ್ ಶಿರಶೆಠ್, ಶಿವಾಜಿರಾವ್ ಮಾನೆ, ಪ್ರಭಾಕರ ಶಿಂದೆ, ದತ್ತಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಮರ್ ಯಾದವ್, ಜ್ಯೋತಿರಾಮ್ ಯಾದವ್, ಅಮರ್ ಶಿತೋಳೆ, ಚಂದ್ರಕಾಂತ್ ಪಾಟೀಲ್, ಸಾಗರ್ ಲೋಕರೆ , ಅನಿಲ್ ಮಾನೆ, ಅರುಣ್ ಮಾನೆ ಸೇರಿದಂತೆ ಚಿಕ್ಕೋಡಿ ತಾಲ್ಲೂಕಿನ ಅನೇಕ ಮುಖಂಡರು ಉಪಸ್ಥಿತರಿದ್ದರು.