ಬೆಟಗೇರಿ: ವೀರರಾಣಿ ಚೆನ್ನಮ್ಮಳ ಜಯಂತಿ ಆಚರಣೆ
ಬೆಟಗೇರಿ 23: ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಅ.23ರಂದು ಹಮ್ಮಿಕೊಂಡ ವೀರರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಸ್ಥಳೀಯ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರು ವೈ.ಸಿ.ಶೀಗಿಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೀರರಾಣಿ ಚೆನ್ನಮ್ಮಳ ಭಾವ ಚಿತ್ರಕ್ಕೆ ಪೂಜೆ, ಪುಷ್ಾರೆ್ಪನ ಸಮರೆ್ನ ಕಾರ್ಯಕ್ರಮ ನಡೆದ ಬಳಿಕ ಸಿಹಿ ವಿತರಿಸಲಾಯಿತು. ಇಲ್ಲಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ ಸನದಿ ಅವರು, ವೀರರಾಣಿ ಚೆನ್ನಮ್ಮಳ ಬದುಕಿನ ಹಾಗೂ ದೇಶಪ್ರೇಮದ ಕುರಿತು ಮಾತನಾಡಿದರು. ಎಮ್.ಎಸ್.ಪಾಟೀಲ, ಜಿ.ಎಮ್ ಕಮತ, ಪದ್ಮಾಶ್ರೀ., ಜಿ.ಪಿ.ಕೋಣಿ, ಪಿ.ಎಚ್ ಬಂಡಿವಡ್ಡರ, ರಾಜು ಜಾಡರ, ಡಿ.ಎಸ್.ಕುಂಬಾರ, ವಿ.ಕೆ.ಪತ್ತಾರ, ವಿಶ್ವನಾಥ ಶೀಗಿಹಳ್ಳಿ ಸೇರಿದಂತೆ ಶಾಲೆಯ ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು. ಬೆಟಗೇರಿ:ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ವೀರರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.