ದುರದುಂಡಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಧಾನ ಗುರು ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಗೋಕಾಕ 08: ಸಮೀಪದ ಚಿಲಭಾವಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಪ್ರಧಾನ ಗುರು ನಾಗಪ್ಪ ಮುತ್ತೇಪ್ಪ ದುರದುಂಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಯುವ ವಾಹಿನಿ ಜನ ಸೇವಾ ಸಂಘ ಹಾಗೂ ನಾಡಿನ ಸಮಾಚಾರ ಸೇವಾ ಸಂಘ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಭವನ ಸಭಾಂಗಣದಲ್ಲಿ ಜರುಗಿದ ವಿಶ್ವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರ ಸಂಗಮ ಸಾಧನೆಯ ಸಂಭ್ರಮ ಸಮಾರಂಭದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರಧಾನ ಗುರು ಪ್ರಶಸ್ತಿಯನ್ನು ಬೆಳಗಾವಿ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಯುವ ಮುಖಂಡ ಶಶಿ ಕನ್ನಪಪ್ಪನವರ, ನಿವೃತ್ತ ಪ್ರಧಾನ ಗುರು ಶ್ರೀಕಾಂತ ಹಂಚಿನಾಳ, ಸಿಆರ್‌ಪಿ ಸುಭಾಷ್ ಪಾಟೀಲ, ರಾಜ್ಯ ಸಂಘಟಣಾ ಕಾರ್ಯದರ್ಶಿ ರಾಜಗೋಪಾಲ ಮಿತ್ರಣ್ಣವರ, ಚಿಕ್ಕೋಡಿ ಜಿಲ್ಲಾಧ್ಯಕ್ಷರು ಎಸ್. ಬಿ. ಸಿಂಗೆ, ಪಧಾಧಿಕಾರಿಗಳಾದ ಎಸ್. ಬಿ. ಭೀಮಗೋಳ, ಎ. ಜಿ. ಕಾಂಬಳೆ, ವಾಜರೆ, ಗೋರ್ಲಿ, ಮಸಾನೆ, ರಾಜು ತಳವಾರ, ಸಂಜು ಕಟ್ಟೆನ್ನವರ, ಎಸ್. ಬಿ.ಕಲ್ಯಾಣಿ, ಪ್ರಧಾನ ಗುರು ಎಂ.ಎನ್.ಮಗದುಮ್, ಅಧ್ಯಕ್ಷ ಬಸವರಾಜ ಉಪ್ಪಾರಹಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.