ಗೋಕಾಕ್

ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಬಿಷಪ್ ಡಾ. ಪ್ರವೀಣ್ ಪೌಲ್ ಸನ್ಮಾನ

ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಬಿಷಪ್ ಡಾ. ಪ್ರವೀಣ್ ಪೌಲ್ ಸನ್ಮಾನ


         ಗೋಕಾಕ 29 :  ಘಟಪ್ರಭಾ ನಗರದ ಬೆಥೆಸ್ತಾ ಚರ್ಚ್ನ 20ನೇ ವಾರ್ಷಿಕೋತ್ಸವದ ಅಂಗವಾಗಿ, ಇಂದು ಗೋಕಾಕ ನಗರದ ಶಾಸಕರ ಗೃಹ ಕಚೇರಿಯಲ್ಲಿ ಗೋಕಾಕ ಕ್ಷೇತ್ರದ ಜನಪ್ರಿಯ ಶಾಸಕರಾದ ರಮೇಶ ಜಾರಕಿಹೊಳಿ ಅವರನ್ನು ಚರ್ಚ್ನ ಸಭಾಪಾಲಕರಾದ ಬಿಷಪ್ ಡಾ. ಪ್ರವೀಣ್ ಪೌಲ್ ಅವರು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.     

          ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು ಬೆಥೆಸ್ತಾ ಚರ್ಚ್‌ 20 ವರ್ಷಗಳ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಚರ್ಚ್ನ ಆಡಳಿತ ಮಂಡಳಿ, ಸಭಾಪಾಲಕರು ಹಾಗೂ ಭಕ್ತಾದಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಚರ್ಚ್ನ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.                 

          ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತ ಮಾಜಿ ಸದ್ಯಸ ಸುಧೀರ ಜೋಡಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣದ) ರಾಜ್ಯಾದ್ಯಕ್ಷ ಪ್ರಶಾಂತ ಅರಳಿಕಟ್ಟಿ, ಪಪಂ ಮಾಜಿ ಸದ್ಯಸರಾದ ಸುರೇಶ ಪೂಜೇರಿ, ಮಲ್ಲು ಕೋಳಿ, ಪ್ರಾಕ್ಲಿನ್ ನವಗ್ರಹ ಸೇರಿದಂತೆ ಚರ್ಚನ ನೂರಾರು ಸದ್ಯಸರು ಉಪಸ್ಥಿರಿದರು. 


ಸುದ್ದಿ ಓದಿ