ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ : ಶಾಸಕ ಪಠಾಣ
ಶಿಗ್ಗಾವಿ19 : ವಿವಿಧ ಸ್ವರೂಪೀ ತಾಯಿಯ ಕೃಪೆಯಿಂದ ಶಿಗ್ಗಾವಿ ಕ್ಷೇತ್ರ ಸೇರಿದಂತೆ ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ ಎಂದು ಶಾಸಕ ಯಾಸೀರಖಾನ ಪಠಾಣ ಪ್ರಾರ್ಥಿಸಿದರು.
ಪಟ್ಟಣದ ನವನಗರದಲ್ಲಿರುವ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಹಾವೇರಿ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ವಸಂತಾ ಬಾಗೂರ ಆಯೋಜಿಸಿದ್ದ ಮಹಾಕಾಳಿ ದೇವಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಧಾರ್ಮಿಕ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳುಸಮಾಜದಲ್ಲಿ ಒಗ್ಗಟ್ಟು, ಶಾಂತಿ ಮತ್ತು ಸೌಹಾರ್ದತೆಯನ್ನು ಗಟ್ಟಿಗೊಳಿಸುತ್ತವೆ.
ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ತಾಯಿ ಮಹಾಕಾಳಿಯ ದರ್ಶನ ಪಡೆದು ವಿಶೇಷ ಪೂಜೆಸಲ್ಲಿಸಿರುವುದು ಸಂತಸ ತಂದಿದೆ ಎಂದರು. ಕ್ಷೇತ್ರದ ಎಲ್ಲ ಸಮಾಜಗಳ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ಸುಮಾರು 450 ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಅಣ್ಣಪ್ಪ ಲಮಾಣಿ, ಶಂಕ್ರಣ್ಣ ಗಂಗಣ್ಣವರ, ಯೂನುಸ್ ಹೋತನಹಳ್ಳಿ, ಪ್ರಧಾನ ಅರ್ಚಕ ವೇ.ಮೂ. ಷಣ್ಮುಖಶಾಸ್ತ್ರಿಗಳು, ಮ. ಹಿರೇಮಠ, ಕಾಳಿಂಗಪ್ಪ ಕೋಣಪ್ಪನವರ, ವೀರಭದ್ರ್ಪ ಹೊಸಮನಿ, ವಿಶ್ವಶಾಂತಿ ಮಹಿಳಾ ಸಂಘದ ಅಧ್ಯಕ್ಷೆ ನೇತ್ರಾವತಿ ಕೀವುಡನವರ, ಏಕದಂತ ಯುವಕ ಮಂಡಳದ ಅಧ್ಯಕ್ಷ ವಿಜಯ ಈಳಿಗೇರ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.