ವಿಜಯಪುರ

ಉದ್ಯಾನ ನಗರಿ ನಾರಿಯರ ನವರಾತ್ರಿ ಸಂಭ್ರಮ

ಉದ್ಯಾನ ನಗರಿ ನಾರಿಯರ ನವರಾತ್ರಿ ಸಂಭ್ರಮ


ಆಲಮಟ್ಟಿ  19:  ಕೃಷ್ಣೆ ತಟದ ವಸುಂಧರೆಯರಿಗೆ ನವರಾತ್ರಿ ಹಬ್ಬ ಜೀವಕಳೆ ಸೊಬಗು ತಂದಿದೆ. ಸಂತೋಷ, ಉತ್ಸಾಹ ನಾರಿ ವಲಯದಲ್ಲಿ ಸೃಜೀಸಿದೆ.     ಆಲಮಟ್ಟಿ ಡ್ಯಾಂಸೈಟ್ ವಸಾಹತು ಕಾಲೋನಿಯ ಮಹಿಳೆಯರು ನವರಾತ್ರಿ ಒಂಬತ್ತನೇ ದಿನ ಸೋಮವಾರ ನವಿಲು ಹಸಿರು ಬಣ್ಣದ ಸೀರೆಗಳನ್ನು ಧರಿಸಿ ಧಾಮಿ9ಕ ಕಾಯಕ ಕೈಗೊಂಡರು.  ಬನ್ನಿ ಮಹಾಕಾಳಿ ದೇಗುಲಕ್ಕೆ ತೆರಳಿ ಶ್ರದ್ಧೆಯಿಂದ ಪೂಜಾ ಭಕ್ತಿ ಸಮಪಿ9ಸಿದರು.   ದಸರಾ ಹಬ್ಬದ ಪ್ರಯುಕ್ತ ಪ್ರತಿನಿತ್ಯ ಒಂಬತ್ತು ದಿನಗಳ ಕಾಲ ನಾರಿಯರು ಬನ್ನಿಗಿಡಕ್ಕೆ ಸಾಂಪ್ರದಾಯಿಕ ಪೂಜೆ ,ಪುರಸ್ಕಾರ ನೆರವೇರಿಸಿ ಧನ್ಯತೆ ಮೆರೆದರು. ನವರಾತ್ರಿ ಭಕ್ತಿರಸದ ಪಣತೆಯಲ್ಲಿ ವಿಶೇಷವಾಗಿ ಶ್ವೇತಾ ಹೇಮಗಿರಿಮಠ, ಭಾಗೀರಥಿ ಗೌಡರ, ಪೂಣಿ9ಮಾ ಕಳಸದ, ಶ್ರುತಿ ಶ್ರೀಶೈಲ, ನಂದಾ ಮುಚಕನ್ನವರ, ಭೂಮಿಕಾ ಹೇಮಗಿರಿಮಠ ಸೇರಿದಂತೆ ನೇಹಾ, ಪ್ರೀತಿ, ಸ್ವಾತಿ, ಸ್ನೇಹ, ರುಕ್ಮಿಣಿ ಮಿಂದೆದ್ದು ಭಕ್ತಿ ತರ​‍್ಣ ಸಮಪಿ9ಸಿದರು. ನವರಾತ್ರಿ ಪವಿತ್ರತೆ ಮೌಲ್ಯ ಕೃಷ್ಣೆಯ ತಟದಲ್ಲಿ ಈ ನಾರಿಮಣಿಗಳ ಬಳಗದಿಂದ ಶುಭ್ರತೆಯಿಂದ ನೆರವೇರಿತು.ಪೋಟೋ : ಆಲಮಟ್ಟಿ ಡ್ಯಾಂಸೈಟ್ ಕಾಲೋನಿಯ ಮಹಿಳೆಯರು ಸೋಮವಾರ ನವರಾತ್ರಿ ಹಬ್ಬದ ಅಂಗವಾಗಿ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಿ ಅಪಿ9ಸಿದರು. ಒಂಬತ್ತು ದಿನಗಳ ಕಾಲ ಬನ್ನಿ ಗಿಡಕ್ಕೆ ನಿತ್ಯ ನಸುಕಿನಲ್ಲಿಯೇ ಪೂಜಾವಿಧಿ ನೆರವೇರಿಸಿದ್ದು ವಿಶೇಷ. 


ಸುದ್ದಿ ಓದಿ