ಅ.22ರಂದು ಡಾ. ಪ್ರಭುಗೌಡರಿಂದ ಬನ್ನಿ ವಿನಿಮಯ ಕಾರ್ಯಕ್ರಮ
ಲೋಕದರ್ಶನ ವರದಿ
ದೇವರಹಿಪ್ಪರಗಿ 19: ವಿಜಯದಶಮಿ ಹಬ್ಬದ ಅಂಗವಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಉಸ್ತುವಾರಿ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ಅವರು ವಿಜಯಪುರದಲ್ಲಿರುವ ತಮ್ಮ ಸ್ವಗೃಹದಲ್ಲಿ(ಅ.22) ರಂದು ಗುರುವಾರ ದೇವರಹಿಪ್ಪರಗಿ ಕ್ಷೇತ್ರದ ಜನತೆಯೊಂದಿಗೆ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ದಸರಾ ಹಬ್ಬದ ಸಂಪ್ರದಾಯದಂತೆ ಕ್ಷೇತ್ರದ ಜನತೆ, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ವಿಜಯಪುರದ ಸ್ವಗೃಹಕ್ಕೆ ಭೇಟಿ ನೀಡಿ ಬನ್ನಿ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ವಿಜಯದಶಮಿ ಹಬ್ಬದ ಶುಭಾಶಯಗಳನ್ನು ಪರಸ್ಪರ ಹಂಚಿಕೊಂಡು, ಕ್ಷೇತ್ರದ ಜನರೊಂದಿಗೆ ಪ್ರೀತಿ, ಸ್ನೇಹ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದಿಂದ ಬನ್ನಿ ವಿನಿಮಯ ಕಾರ್ಯಕ್ರಮ ಅನುಗ್ರಹ ನಿಲಯ ಸಂಜೀವಿನಿ ಆಸ್ಪತ್ರೆ ಹತ್ತಿರ, ಜಗಜಂಪಿ ಟ್ರ್ಯಾಕ್ಟರ್ ಶೋರೂಮ್ ಹಿಂದೆ ಬೆಂಗಳೂರು ಹೈವೇ ರಸ್ತೆ ವಿಜಯಪುರದ ಸ್ವಗೃಹದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರ ಆಪ್ತ ಸಹಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.