ಮಾಹಾತ್ಮರ ಜಯಂತಿ ಅರ್ಥಪೂರ್ಣವಾಗಿ ಆಚರಣೆಗೆ ಸಿದ್ಧತೆ
ಲೋಕದರ್ಶನ ವರದಿ
ಇಂಡಿ 19: ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಮಹರ್ಷಿ ವಾಲ್ಮೀಕಿ ಹಾಗೂ ಮಧ್ವಾಚಾರ್ಯರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉಪ ತಹಸೀಲ್ದಾರ್ ಹಾಗೂ ಇಂಡಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾವೂರ ಹೇಳಿದರು. ಅವರು ಇಂಡಿ ನಗರದ ತಹಶೀಲ್ದಾರ್ ಕಾರ್ಯಲದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಕಿತ್ತೂರು ಚೆನ್ನಮ್ಮ ಅಗ್ರಗಣ್ಯರು.ಬ್ರೀಟಿಷರಿಗೆ ತಲೆಬಾಗುವುದಿಲ್ಲ’ ಎಂದು ಝೇಂಕರಿಸಿ, ಕಿತ್ತೂರು ಸಂಸ್ಥಾನದ ಸ್ವಾಭಿಮಾನವನ್ನು ಕಾಪಾಡಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ದಿಟ್ಟ ಮಹಿಳೆ. ಇವರ ಜಯಂತಿಯು ಕನ್ನಡಿಗರಲ್ಲಿ ದೇಶಪ್ರೇಮ, ಸ್ವಾಭಿಮಾನ ಮತ್ತು ವೀರಾವೇಶವನ್ನು ಜಾಗೃತಗೊಳಿಸುವ ಮಹತ್ವದ ದಿನವಾಗಿದೆ.*ಮಹರ್ಷಿ ವಾಲ್ಮೀಕಿ ಜಯಂತಿ* ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಮಹಾಕಾವ್ಯವಾದ ಸಂಸ್ಕೃತದ ’ರಾಮಾಯಣ’ವನ್ನು ರಚಿಸಿದ ವಿಶ್ವವಿಖ್ಯಾತ ಮಹಾಪುರುಷರು.ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ರಾಮರಾಜ್ಯದ ಪರಿಕಲ್ಪನೆಯನ್ನು ಜನತೆಗೆ ನೀಡಿದವರು. ವಾಲ್ಮೀಕಿ ಜಯಂತಿಯು ಸಮಾನತೆ, ಸೌಹಾರ್ದತೆ ಮತ್ತು ಜ್ಞಾನದ ಪ್ರತೀಕವಾಗಿ ಆಚರಿಸಲ್ಪಡುತ್ತದೆ. *ಶ್ರೀ ಮಧ್ವಾಚಾರ್ಯರು*ಭಾರತೀಯ ತತ್ವಶಾಸ್ತ್ರದ ಚರಿತ್ರೆಯಲ್ಲಿ ಪ್ರಮುಖ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀ ಮಧ್ವಾಚಾರ್ಯರು ’ದ್ವೈತ ಸಿದ್ಧಾಂತಿಗಳು’ (ತತ್ವವಾದ). 13ನೇ ಶತಮಾನದಲ್ಲಿ ಉಡುಪಿಯಲ್ಲಿ ಜನ್ಮತಾಳಿದ ಇವರು ಭಾರತೀಯ ಆಧ್ಯಾತ್ಮಿಕ ಲೋಕಕ್ಕೆ ಹೊಸ ದಿಕ್ಕನ್ನು ನೀಡಿದ ಮಹಾತ್ಮ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.ಈ ಇಂಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಹುಲ್ ಜಾಧವ ಹಾಗೂ ವಿವಿಧ ಇಲಾಖೆಯಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.