ಬೆಳಗಾವಿ

ಮುಂದಿನ ವರ್ಷ ಉತ್ತಮ ಮಳೆ; ಸಮೃದ್ಧ ಬೆಳೆಗಾಗಿ ಶಕ್ತಿ ದೇವಿಯಲ್ಲಿ ಪ್ರಾರ್ಥನೆ: ಶಾಸಕ ವಿಶ್ವಾಸ ವೈದ್ಯ

ಮುಂದಿನ ವರ್ಷ ಉತ್ತಮ ಮಳೆ; ಸಮೃದ್ಧ ಬೆಳೆಗಾಗಿ ಶಕ್ತಿ ದೇವಿಯಲ್ಲಿ ಪ್ರಾರ್ಥನೆ: ಶಾಸಕ ವಿಶ್ವಾಸ ವೈದ್ಯ
Prayers offered to the Goddess of Power for good rainfall and a bountiful harvest next year: MLA Vi


ಸವದತ್ತಿ 19: ಮುಂದಿನ ವರ್ಷ ಉತ್ತಮ ಮಳೆಯಾಗಲಿ ಮತ್ತು ರೈತರಿಗೆ ಸಮೃದ್ಧ ಬೆಳೆ ಸಿಗಲಿ ಎಂದು ಶಕ್ತಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ. ಮೈಸೂರು ದಸರೆಯ ನಂತರ ಅಷ್ಟು ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ ನಮ್ಮ ಸವದತ್ತಿಯ ನಾಡಹಬ್ಬವೇ ಆಗಿದೆ ಎಂದು ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಹೇಳಿದರು.ಇಲ್ಲಿನ ಗಾಂಧಿ ಚೌಕದಲ್ಲಿ ಸಾಮಾಜಿಕ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾದ ನವರಾತ್ರಿ ನಾಡಹಬ್ಬದ ಧಾರ್ಮಿಕ ಹಾಗೂ ಚಿಂತನ ಕಾರ್ಯಕ್ರಮವು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ಸಂಜೆ 7:00 ಗಂಟೆಗೆ ಶ್ರೀ ಶಕ್ತಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ತದನಂತರ ಶ್ರೀ ಹನುಮಾನ ಭಜನಾ ಮಂಡಳಿ, ಗುರ್ಲಹೊಸೂರ ಇವರಿಂದ ಜರುಗಿದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮವು ನೆರೆದಿದ್ದ ನೂರಾರು ಭಕ್ತರನ್ನು ಮಂತ್ರಮುಗ್ಧಗೊಳಿಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ನವರಾತ್ರಿಯ ಈ ಪವಿತ್ರ ದಿನದಂದು ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಜನರ ಮಧ್ಯೆ ಒಗ್ಗಟ್ಟು  ಭ್ರಾತೃತ್ವದ ಭಾವನೆಯನ್ನು ವೃದ್ಧಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಮುಖಂಡ ಬಸವರಾಜ ಶೇಗಾವಿ ಅವರು ಆಗಮಿಸಿ ಮಾತನಾಡಿದರು. ಇದೇ ವೇಳೆ ಝೀ ಕನ್ನಡ ಸರಿಗಮಪ ಖ್ಯಾತಿಯ ಬಾಲಪ್ರತಿಭೆ ಕು. ಮಹನ್ಯಾ ಗುರು ಪಾಟೀಲ ಅವರನ್ನು ವೇದಿಕೆ ಮೇಲೆ ಗೌರವಿಸಿ ಸನ್ಮಾನಿಸಲಾಯಿತು.

ತದನಂತರ ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಧಾರ್ಮಿಕ  ಸ್ಥಳೀಯ ಗಣ್ಯರು, ಹಿರಿಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. 


ಸುದ್ದಿ ಓದಿ