ಇಂಡಿ

ಹೋರ್ತಿ ಮತ್ತು ಅಥರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ಹೋರ್ತಿ ಮತ್ತು ಅಥರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ


ಲೋಕದರ್ಶನ ವರದಿ 

ಇಂಡಿ 17: ತಾಲ್ಲೂಕಿನ ಹೋರ್ತಿ ಬಳಿ ಸೋಲ್ಲಾಪೂರ- ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಮತ್ತು ಅಥರ್ಗಾ ಗ್ರಾಮದ ಬಳಿ ಅಕ್ಕಲಕೋಟ-ವಿಜಯಪೂರ  ರಾಷ್ಟ್ರೀಯ ಹೆದ್ದಾರಿ ತಡೆದು ಜೋಡೆತ್ತಿನ ರೈತರ ನಂದಿ ಸೇನೆಯ ವತಿಯಿಂದ ಬೃಹತ್ ಹಕ್ಕೊತ್ತಾಯ ಮಾಡಿದರು.  ಬೆಳೆಗ್ಗೆಯಿಂದ ಹೋರ್ತಿ ಇಂಚಗೇರಿ ಸಾವಳಸಂಗ  ಕೊಳುರಿಗಿ ನಿಂಬಾಳ ತಡವಲಗಾ ಅಥರ್ಗಾ ಬೋಳೆಗಾಂವ  ಕ್ಯಾತಿನಕೇರಿ ಸೇರಿದಂತೆ ಅನೇಕ ಗ್ರಾಮಗಳಿಂದ  ನೂರಾರು ರೈತರು ಎತ್ತಿನ ಬಂಡಿಗಳ ಸಮೇತವಾಗಿ ಬಂದ ರೈತರು ಹೋರ್ತಿ ರೇವಣಸಿದ್ದೇಶ್ವರ ದೇವಾಲಯ ಪಕ್ಕದ ರಾಷ್ಟ್ರೀಯ ಹೆದ್ದಾರಿ ಹಾಗೂ ಅಥರ್ಗಾ  ಗ್ರಾಮದ ರೇವಣಸಿದ್ಧೇಶ್ವರ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ  ಜ್ಞಾನಯೋಗಿ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ.


ಈ ಸುದ್ದಿ ತಿಳಿದು ಅಥರ್ಗಾ ಗ್ರಾಮದಲ್ಲಿ ಹೋರಾಟ ನಿರತ ಸ್ಥಳಕ್ಕೆ ಆಗಮಿಸಿದ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ರೈತರ ಈ ದೇಶದ ಬೆನ್ನೆಲುಬು  ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ    ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ಜಾರಿಯಾಗಬೇಕು ಎಂಬುದು ರೈತರ ಸ್ಪಷ್ಟ ನಿಲುವಾಗಿದೆ. ಹಾಗೂ ಪ್ರತಿ ಜೋಡೆತ್ತಿನ ಕೃಷಿಕನಿಗೆ ಪ್ರತಿ ತಿಂಗಳು ಹನ್ನೊಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ಯೋಜನೆ ಜಾರಿ ಆಗಬೇಕು ಎಂಬುದು ತಮ್ಮ ನಿಲುವು  ಇಂದು ಅಥರ್ಗಾ ಗ್ರಾಮದ ಮುರುಘರಾಜೇಂದ್ರ ಪೂಜ್ಯರ ಸಾನಿಧ್ಯದಲ್ಲಿ ಇಂದು ಅಥರ್ಗಾ ಗ್ರಾಮದಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸುವ ಮೂಲಕ ಹಾಗೂ ತಮ್ಮ ಮನವಿ ಪತ್ರವನ್ನು ಮೂಲಕ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರಲು ಸರ್ಕಾರದೊಂದಿಗೆ ಚಿಂತನೆ ನಡೆಸಿ  ಸರ್ಕಾರದಿಂದ ಯೋಜನೆಯ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.


ಈ ಹೋರಾಟದಲ್ಲಿ ಅಥರ್ಗಾ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀರಿಶ್ ಚಾಂದಕೋಟೆ ಗಣಪತಿ ಬಾಣಿಕೋಲ ರೇವಣಸಿದ್ದ ಅಂಕಲಿಗಿ ಕುಲಪ್ಪ ಹಿಟ್ಟನ್ನಳ್ಳಿ ಚಂದ್ರಾಮ ಗುಳಗಿ ಗುರುಲಿಂಗಪ್ಪ ಬಿರಾದಾರ ರಾವುತಪ್ಪ ತಡ್ಲಗಿ ಬಸವರಾಜ ಬಗಲಿ ಹಣಮಂತ ಶಿರಶ್ಯಾಡ ಹಣಮಂತ ಗುಂಡಗರಜಿ ಮಲ್ಲಪ ಲೋಣಿ ಫೀರ​‍್ಪ ಲಿಂಗದಹಳ್ಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ