ನೂತನ ಹನುಮಂತ ದೇವಸ್ಥಾನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ
ಲೋಕದರ್ಶನ ವರದಿ
ಆಲಮೆಲ 17 : ಪಟ್ಟಣದ ವಿನಾಯಕ ಕಾಲನಿಯಲ್ಲಿ ಶಾಸಕ ಅಶೋಕ ಮನಗೂಳಿ ಅವರು ಮಂಜೂರು ಮಾಡಿದ್ದ 5 ಲಕ್ಷ ಅನುದಾನದಲ್ಲಿ ನೂತನ ಹನುಮಂತ ದೇವಾಲಯದ ಕಟ್ಟಡ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಕಾಮಗಾರಿಗೆ ಹಿರಿಯ ಪೂಜ್ಯರಾದ ವೀರಪಾಕ್ಷಯ್ಯ ಮಠದವರು ಪೂಜಾ ಕಾರ್ಯ ನೆರವೇರಿಸಿದರು. ಕಾಮಗಾರಿ ಸಮಿತಿ ಅಧ್ಯಕ್ಷ ಬಸವರಾಜ ತೊರವಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರೊ. ಶಿವಶರಣ ಗುಂಡಗಿ, ಬಸವರಾಜ ಜಾನ, ಬಾಬು ಬಂಡಗಾರ, ಡಾ. ಶ್ರೀಶೈಲ ಪಾಟೀಲ, ಶ್ರೀಪತಿಗೌಡ ಪಾಟೀಲ, ಬತ್ತಯ್ಯ ಮಠ, ಹಣಮಂತ ಕುಂಬಾರ, ಗುರು ಕೊಣಶಿರಸಗಿ, ಧರ್ಮಗೌಡ ಪಾಟೀಲ, ವಿಠ್ಠಲ ಕುರುಬತಹಳ್ಳಿ, ಬಸುಗೌಡ ಪಾಟೀಲ, ಸಿದ್ದು ಸಲಾದಹಳ್ಳಿ, ಸಿದ್ದಾರಾಮ ಲಾಳಸಂಗಿ, ಶಿವಾನಂದ ಮಠ, ಮದರಿಗೌಡ ಶಿವಪ್ಪ ಜಂಗಮಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.