ವಿಜಯಪುರ

ದುರ್ಗಾದೇವಿ ದೇವಸ್ಥಾನದಲ್ಲಿ ಚಂಡಿಕಾ ಮಹಾಯಜ್ಞೆ

ದುರ್ಗಾದೇವಿ ದೇವಸ್ಥಾನದಲ್ಲಿ ಚಂಡಿಕಾ ಮಹಾಯಜ್ಞೆ

ಲೋಕದರ್ಶನ ವರದಿ 


ಕಲಕೇರಿ 17 :  ದೇವಿಯ ಪುರಾಣ ದೇಹದ ಪುರಾಣವೇ ಆಗಿದ್ದು, ನಮ್ಮಲ್ಲಿರುವ ದುರ್ಗುಣಗಳನ್ನು ಹೊಡೆದು ಹಾಕಿ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದೇ ದೇವಿಯ ಪುರಾಣದ ಮಹತ್ವವಾಗಿದ್ದು, ಪ್ರತಿಯೊಬ್ಬರೂ ದೇವಿಯ ಪುರಾಣವನ್ನು ಆಲಿಸಿ ಪುನೀತರಾಗಬೇಕು ಮತ್ತು ಲೋಕದ ಕಲ್ಯಾಣಕ್ಕಾಗಿ ಇಂತಹ ಹೋಮ, ಹವನ ಮತ್ತು ಯಜ್ಞಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯರಾದ ಬಸವರಾಜ ಚಿಕ್ಕಮಠ ಮತ್ತು ಆರ್‌.ಜಿ.ಗುಮಶೆಟ್ಟಿ ಅವರು ಹೇಳಿದರು. 


ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್‌ನವರಾತ್ರಿ ಅಂಗವಾಗಿ ದೇವಿ ಉಪಾಸಕರಾದ ಮಲಕಮ್ಮ ದೊರಿಗೋಳ ಅವರ ಸಂಕಲ್ಪದಂತೆ ಲೋಕ ಕಲ್ಯಾಣಾರ್ಥವಾಗಿ ವಿಶ್ವಕರ್ಮ ಮೂರುಜಾವಧೀಶ್ವರಮಠದ ಪ್ರಣವ ನಿರಂಜನ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ವಿಶೇಷ ಚಂಡಿಕಾ ಯಜ್ಞೆಯ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.  


ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಯಜ್ಞಕುಂಡದ ಪೂಜೆಯೊಂದಿಗೆ ತಿಳಗೂಳ ಬಹ್ಮವಿದ್ಯಾಶ್ರಮದ ಮಹೇಶ್ವರಾನಂದಜೀ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಚಂಡಿಕಾ ಯಜ್ಞದಲ್ಲಿ ದುರ್ಗಾದೇವಿಯ ಸೇವಾಕರ್ತರು ದಂಪತಿ ಸಮೇತ ಪಾಲ್ಗೊಂಡು ಹವಿಸ್ಸನ್ನು ಅರ​‍್ಿಸಿ ಪ್ರಾರ್ಥಿಸಿದರು. 


ಸುದ್ದಿ ಓದಿ