ಧಾರವಾಡ - ಹುಬ್ಬಳ್ಳಿ

ಸುದರ್ಶನರಾಜ ಫೌಂಡೇಶನ್ ದತ್ತಿ ಅಂಗವಾಗಿ ‘ಸಾಮಾಜಿಕ ಜಾಲತಾಣಗಳು ಮತ್ತು ವ್ಯಕ್ತಿ ಗೌರವ’ ಉಪನ್ಯಾಸ

ಸುದರ್ಶನರಾಜ ಫೌಂಡೇಶನ್ ದತ್ತಿ ಅಂಗವಾಗಿ ‘ಸಾಮಾಜಿಕ ಜಾಲತಾಣಗಳು ಮತ್ತು ವ್ಯಕ್ತಿ ಗೌರವ’ ಉಪನ್ಯಾಸ

ಲೋಕದರ್ಶನ ವರದಿ 

ಧಾರವಾಡ : ಪ್ರಾಚೀನ ಕಾಲದಲ್ಲಿ ಮಾತಿನ ಮೂಲಕ ವಚನವನ್ನ ಪೂರೈಸುವ ಮೌಲ್ಯಯುತ ಪದ್ಧತಿ ಇತ್ತು. ನಂತರ ಅಕ್ಷರ, ಬರವಣಿಗೆ ಬಂದ ಮೇಲೆ ಮಾತಿಗಿದ್ದಂಥ ಮಹತ್ವ ಕ್ರಮೇಣ ಕಡಿಮೆಯಾಗುತ್ತ ಬಂದಿತು. ಆದರೆ ಸಾಮಾಜಿಕ ಬದುಕನ್ನು ನಿರ್ಧರಿಸುವ ವಿಜ್ಞಾನ ಮತ್ತು ತಂತ್ರಜ್ಞಾನ ಅಗಾಧವಾಗಿ ಬೆಳೆದು ಎಲ್ಲರ ಮನೆಮಾತಾಗಿದೆ ಎಂದು ಡಾ. ಸಂಜೀವ ಕುಲಕರ್ಣಿ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ. ಸುದರ್ಶನರಾಜ ಫೌಂಡೇಶನ್ ದತ್ತಿ ಅಂಗವಾಗಿ ದಿನಾಂಕ:  18ರಂದು ಆಯೋಜಿಸಿದ್ದ ‘ಸಾಮಾಜಿಕ ಜಾಲತಾಣಗಳು ಮತ್ತು ವ್ಯಕ್ತಿ ಗೌರವ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.  

ಕಳೆದ 25 ವರ್ಷಗಳಿಂದ ಕಂಪ್ಯೂಟರ್ ಟ್ಯಾಬ್, ಮೊಬಾಯಿಲ್ ಇತ್ಯಾದಿ ತಾಂತ್ರಿಕ ವ್ಯವಸ್ಥೆ ಬಂದ ಮೇಲೆ ಅಭಿಪ್ರಾಯ, ಮಾಹಿತಿ, ಭಾವಚಿತ್ರ, ಅಡಿಯೋ, ವಿಡಿಯೋ ಹಂಚಿಕೊಳ್ಳಲು ಸುಲಭ ಸಾಧ್ಯವಾಗಿದೆ. ಫೇಸ್‌ಬುಕ್, ವಾಟ್ಸಟ್, ಇನ್ಸಾ-್ಟ್ರಗ್ರಾಮ್ ಬಳಕೆ, ಉಪಯೋಗ ಹೆಚ್ಚಾಗಿದೆ.  

ಒಬ್ಬ ವ್ಯಕ್ತಿ ಗೌರವದ ಬಗ್ಗೆ ಅಸತ್ಯವಾಗಿ ಇಲ್ಲಸಲ್ಲದ ಮಾತುಗಳನ್ನು ಹಂಚಿಕೊಳ್ಳುವದು, ವ್ಯಂಗ್ಯ, ಅಪಹಾಸ್ಯ, ಲಿಂಗತಾರತಮ್ಯ, ವರ್ಣಬೇಧ ಹಾಗೂ ಭಾಷಣಕ್ಕೆ ಸಂಬಂಧಿಸಿದಂತೆ ವಾಸ್ತವಿಕತೆಯನ್ನು ಮರೆಮಾಚಿ, ತಮಗೆ ಬೇಕಾದ ರೀತಿಯಲ್ಲಿ ತಿರುಚುವುದು.

  ಅವಹೇಳನಕಾರಿ ಹೇಳಿಕೆ ನೀಡುವುದು ಅದನ್ನು ಆಲೋಚನೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಮಾಜದ ಸ್ವಾಸ್ಥ್ಯ ಕದಡುವುದು ಹೀಗೆ ಆಧುನಿಕ ತಂತ್ರಜ್ಞಾನದ ದುರ್ಬಳಕೆೆ ಹೆಚ್ಚಾಗುತ್ತಿದೆ. ಈ ದಿಶೆಯಲ್ಲಿ ಸರಕಾರವು ಇನ್ನೂ ಗಂಭೀರವಾಗಿ  ತಜ್ಞರ ಜೊತೆ ಸಮಾಲೋಚಿಸಿ ನಿಯಂತ್ರಿಸಲು ಮುಂದಾಗಬೇಕು ಎಂದರು.  

ದತ್ತಿದಾನಿ ಹಾಗೂ ಸುಪ್ರೀಂಕೋರ್ಟ್‌ ವಕೀಲರಾದ ಸಿ. ಎಂ. ಅಂಗಡಿ ಗೌರವ ಉಪಸ್ಥಿತರಿದ್ದು ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಇತಿಮಿತಿಗೊಳಪಟ್ಟು ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದರು. 

ಧಾರವಾಡ ಕೆ.ಇ. ಬೋರ್ಡ್ಸ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದೇಶಗಳಿಗೆ ಹೋಲಿಕೆ ಮಾಡಿದರೆ ನಾವು ತಂತ್ರಜ್ಞಾನದಲ್ಲಿ ಹಿಂದಿದ್ದೇವೆ. ಸಾಮಾಜಿಕ ಜಾಲತಾಣಗಳು ಉಪಯೋಗದ ಜೊತೆ ದುರುಪಯೋಗವೂ ಆಗುತ್ತಿದೆ. ಇದಕ್ಕೆ ಇತ್ತೀಚಿನ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿಯ ವಿದ್ಯಮಾನಗಳೇ ಸಾಕ್ಷಿ ಎಂದರು.  


ಸುದ್ದಿ ಓದಿ