ಜಲ ಮೂಲಗಳ ಸಂರಕ್ಷಣೆ ಮತ್ತು ಮಣ್ಣು ಮತ್ತು ಮಳೆ ನೀರು ಕೊಯ್ಲು ವಿಷಯ ಕುರಿತು ಕಾರ್ಯಾಗಾರ
ಧಾರವಾಡ 14 : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ವತಿಯಿಂದ ಜಲ ಮೂಲಗಳ ಸಂರಕ್ಷಣೆ ಮತ್ತು ಮಣ್ಣು ಮತ್ತು ಮಳೆ ನೀರು ಕೊಯ್ಲು ವಿಷಯ ಕುರಿತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಜಿ. ಶಿವಮೊಗ್ಗ ವಿದ್ಯಾರ್ಥಿಗಳಿಗೆ ದಿನಾಂಕ:13-10-2026 ರಂದು ಮಹಾವಿದ್ಯಾಲಯದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ತಿಪ್ಪೇಶಪ್ಪ ಜಿ. ಎನ್. ವಿಶೇಷ ಅಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ರವರು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಆಹಾರ ಭದ್ರತೆಯನ್ನು ಸಾಧಿಸುವಲ್ಲಿ ಕೃಷಿಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪೌಷ್ಟಿಕ ಮತ್ತು ಸುರಕ್ಷಿತ ಆಹಾರ ನಿರಂತರವಾಗಿ ಸಿಗುವಂತಾಗಲು ಕೃಷಿ ವಲಯವು ಸುಸ್ಥಿರವಾಗಿ ಬೆಳೆಯಬೇಕು. ಡಾ. ಗೀರೀಶ ಎನ್. ಮರಡ್ಡಿ, ನಿರ್ದೇಶಕರು, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ರವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಣ್ಣು ಸಸ್ಯಗಳ ಬೆಳವಣಿಗೆಗೆ ಆಧಾರವಾಗಿದ್ದು, ಆರೋಗ್ಯಕರ ಮಣ್ಣು ಉತ್ತಮ ಆಹಾರ ಉತ್ಪಾದನೆಗೆ ಅಗತ್ಯವಾಗಿದೆ. ನೀರು ಮತ್ತು ಮಣ್ಣು ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾಗಿರುವುದರಿಂದ ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಮಣ್ಣಿನ ಆರೋಗ್ಯದ ಮಹತ್ವ, ನೀರು ಮತ್ತು ಮಣ್ಣಿನ ಸಂರಕ್ಷಣೆಯ ಮಹತ್ವ, ಮಳೆ ನೀರು ಕೊಯ್ಲು ಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. “ಮಣ್ಣು ಹಿ ನೀರು ಉಳಿಸಿ ಹಿ ಭವಿಷ್ಯ ಉಳಿಸಿ” ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಡಾ. ಸಹನಾ ಎಸ್. ಪ್ರಾಧ್ಯಾಪಕರು, ಕೆ.ಎಸ್.ಎನ್.ಯು.ಎ.ಹೆಚ್.ಎಸ್. ಶಿವಮೊಗ್ಗ ರವರು ಸಹ ಸಂಯೋಜಕರಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇಂ. ಪ್ರದೀಪ ದೇವರಮನಿ, ಸಹ ಪ್ರಾಧ್ಯಾಪಕರು, ವಾಲ್ಮಿ ಇವರು ಸ್ವಾಗತಿಸಿದರು. ಫಕ್ಕಿರೇಶ ಅಗಡಿ, ಸಮಾಲೋಚಕರು, ವಾಲ್ಮಿ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ಇಂದುಧರ ಹಿರೇಮಠ, ಸಹಾಯಕ ಪ್ರಾಧ್ಯಾಪಕರು, ವಾಲ್ಮಿ ಇವರು ವಂದನಾರೆ್ಣ ಮಾಡಿದರು. ಕಾರ್ಯಾಗಾರದಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.