ಬಳ್ಳಾರಿ

ದರೋಜಿ-ಗಂಗಾವತಿ ರೇಲ್ವೆ ಲೈನ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ದರೋಜಿ-ಗಂಗಾವತಿ ರೇಲ್ವೆ ಲೈನ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ಕಂಪ್ಲಿ 14:  ದರೋಜಿ-ಗಂಗಾವತಿ ರೇಲ್ವೆ ಲೈನ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿಯ ಎಸ್‌.ಸಿ ಮೋರ್ಚ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಎ.ಚನ್ನಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಬಳ್ಳಾರಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಬುಧವಾರ ಸಲ್ಲಿಸಿದರು.  ನಂತರ ಎಸ್ಸಿ ಮೋರ್ಚ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಕಂಪ್ಲಿ ಮೂಲಕ ದರೋಜಿ-ಗಂಗಾವತಿ ನಡುವ ಇರುವ 35 ಕಿ.ಮಿ.ಅಂತರದ ನೂತನ ಬ್ಯಾಡಗೇಜ್ ಲೈನ್ ನಿರ್ಮಾಣಕ್ಕೆ ರೈಲ್ವೆ ಮಂಡಳಿ ಕಾರ್ಯ ಸಾಧ್ಯತಾ ವರದಿ ಅವಲೋಕಿಸಿ, 2024 ರ ಆಗಸ್ಟ್‌ 9ರಂದು ಯೋಜನಾ ವೆಚ್ಚವನ್ನು 705.45 ಕೋಟಿ ರೂಪಾಯಿಗೆ ನಿಗದಿ ಪಡಿಸಿದೆ. ದರೋಜಿ-ಗಂಗಾವತಿ ರೈಲ್ವೆ ನೂತನ ಬ್ರಾಡಗೇಜ್ ಲೈನ್ ನಿರ್ಮಾಣದಿಂದ ಹೊಸಪೇಟೆ, ಜಿಂದಾಲ್, ಬಳ್ಳಾರಿಯಿಂದ ಹೈದ್ರಾಬಾದ್‌ಗೆ ಪ್ರಯಾಣ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗಲಿದೆ. ಹುಬ್ಬಳ್ಳಿ, ಗದಗ, ಕೊಪ್ಪಳ, ಗಿಣಿಗೇರಾ ಗಂಗಾವತಿ, ಸಿಂಧನೂರು, ಮಾನ್ನಿ, ತಾಲೂಕಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಜೊತೆಗೆ ಹೊಸಪೇಟೆ, ಬಳ್ಳಾರಿ ನಗರದ ಪ್ರಯಾಣಿಕರಿಗೆ ಮಾತ್ರವಲ್ಲದೆ, ಈ ಭಾಗದ ಸರಕು ಸಾಗಾಣಿಕೆಗೂ ಅನುಕೂಲವಾಗಲಿದೆ. ಕಾರಣ, ಕೇಂದ್ರ ಸರಕಾರ ಸಚಿವ ಸಂಪುಟದಲ್ಲಿ ಇದನ್ನು ಅಂಗೀಕರಿಸಿ, ಅತೀ ಶೀಘ್ರವಾಗಿ ಈ ಯೋಜನೆಯ ನಿರ್ಮಾಣಕ್ಕೆ ಕಾರ್ಯಾಯಂರ್ಭ ಮಾಡಬೇಕು. ಕಂಪ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ ಸೇತುವೆ ಆರು ದಶಕಗಳಷ್ಟಾಗಿದ್ದು ಶಿಥಿಲಗೊಂಡಿದೆ. ನೂತನ ಸೇತುವೆ ನಿರ್ಮಾಣಕ್ಕಾಗಿ ಅನೇಕ ವರ್ಷಗಳಿಂದಲೂ ಮನವಿ ಸಲ್ಲಿಸುತ್ತ ಬಂದಿದ್ದರೂ ಈತನಕವೂ ಕಾರ್ಯಗತವಾಗಿಲ್ಲ. ನೂತನ ಸೇತುವೆಗೆ ಜಮೀನು ಸ್ವಾಧೀನ ಪುಕ್ರಿಯೆ ನಡೆಯುತ್ತಿದೆ ಎನ್ನುವುದು ಈಚೆಗೆ ಕೇಳಿದ್ದುಂಟು. ಕೂಡಲೇ ಸೇತುವೆ ನಿರ್ಮಾಣಕ, ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.  ಈ ಸಂದರ್ಭದಲ್ಲಿ ಮುಖಂಡರಾದ ಅಗಳಿ ಪಂಪಾಪತಿ, ವೈ.ಮುರಳಿ ಮೋಹನರೆಡ್ಡಿ, ಸಿ.ಎಂ.ಬಸವರಾಜ, ಕೆ.ರಂಗಪ್ಪ, ಟಿ.ರಾಜಶೇಖರ, ಡಿ.ರಮೇಶ, ಲಿಂಗರಾಜ, ನಾಗರಾಜ, ಆಕಾಶ, ಎಂ.ವಿರುಪಾಕ್ಷಿ, ಬಿ.ಮಂಜುನಾಥ, ನಾಗರಾಜ ಇದ್ದರು.   





ಸುದ್ದಿ ಓದಿ