ಮಹಾಗಣಪತಿ ಉತ್ಸವದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ
ರಾಣೇಬೆನ್ನೂರು 14 : ಅಶೋಕ ವೃತ್ತದಲ್ಲಿರುವ ಮಹಾಗಣಪತಿ ಉತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಉಚಿತ ಸಾರ್ವಜನಿಕ ಸ್ವಯಂ ಪ್ರೇರಣಾ ರಕ್ತದಾನ ಬೃಹತ ಶಿಭಿರವು ನಡೆಯಿತು. ಸತತ 11ನೇ ಬಾರಿ ತಮ್ಮ ರಕ್ತದಾನವನ್ನು ಕೊಡುಗೆಯಾಗಿ ನೀಡಿದ ಸಿದ್ದೇಶ್ವರ ನಗರದ ಅಂದ ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿರುವ, ಸ್ವತಹ ಅಂದರು ಆಗಿರುವ ನಾಗನಗೌಡ ಬೆಳ್ಳುಳ್ಳಿ ಅವರು, ಸಮಾಜದಲ್ಲಿ ಕಣ್ಣಿಲ್ಲದವರ, ಸಮಸ್ಯೆಗಳು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ, ಮಾನವೀಯ ಗುಣ ಧರ್ಮಗಳು ಕಣ್ಣಿಂದ ತಾನೇ ಬೆಳೆಯುತ್ತದೆ. ರಕ್ತ ಉತ್ಪಾದಿಸುವ ವಸ್ತುವಲ್ಲ. ಅಗತ್ಯವಿರುವವರಿಗೆ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಯಾವುದೇ ಮಡಿವಂತಿಕೆ ತೋರದೆ ಮುಕ್ತ ಮನಸ್ಸಿನಿಂದ ರಕ್ತದಾನ ಮಾಡಿದಾಗ ತಮ್ಮದೇ ಆದ ಸೇವೆ ದೊರಕಿದಂತಾಗುತ್ತದೆ ಅಂತಹ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಶ್ರೀ ಬಸವೇಶ್ವರ ರಕ್ತ ನಿಧಿ ಕೇಂದ್ರದ ವ್ಯವಸ್ಥಾಪಕ ಪ್ರಶಾಂತ್ ಅತ್ತಿಗೆರೆ ಅವರು ಮಾತನಾಡಿ, ಕಣ್ಣು ಕಾಣಿಸದಿದ್ದರೂ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಲೇಬೇಕೆನ್ನುವ ಗುಣ ಧರ್ಮವನ್ನು ಬೆಳೆಸಿಕೊಂಡಿರುವ ನಾಗನಗೌಡ ಅವರು ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ಮಾನವೀಯತೆ ಮೆರೆಯುವುದೇ ನಿಜವಾದ ಮಾನವೀಯ ಧರ್ಮವಾಗಿದೆ. ಎಂದ ಅವರು ತಮ್ಮ ಶ್ರೀ ಬಸವೇಶ್ವರ ರಕ್ತ ನಿಧಿ ಕೇಂದ್ರವು ಸಮಾಜದ ಮುಖ್ಯವಾಹಿನಿಯಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಿರುವ ತುರ್ತು ರಕ್ತ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯದಲ್ಲಿ ತನ್ನನ್ನೇ ತಾನು ನಿರಂತರವಾಗಿ ತೊಡಗಿಸಿಕೊಂಡು ಸೇವೆ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರ ಮುಕ್ತ ಸಹಾಯ ಸಹಕಾರ ಹಾಗೂ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು ಶಿಬಿರದಲ್ಲಿ ನೂರಾರು ನಾಗರಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ, ಸಾರ್ಥಕತೆ ಮೆರೆದರು.ಶಿಬಿರದಲ್ಲಿಸವಣೂರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರಕ್ತ ಶೇಖರಣಾ ಘಟಕದ ಮಹಾಂತೇಶ ಹೊಳೆಮ್ಮನವರ ಸೇರಿದಂತೆ ರತ್ನ ನಿಧಿ ಕೇಂದ್ರದ ಗಣ್ಯರು ಉಪಸ್ಥಿತರಿದ್ದರು.