ಗದಗ

ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಮುಕ್ತಿಮಂದಿರ ಶ್ರೀಗಳು

ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಮುಕ್ತಿಮಂದಿರ ಶ್ರೀಗಳು

ಲಕ್ಷ್ಮೇಶ್ವರ 14: ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿ ಒಂದಲ್ಲೊಂದು ದಿನ ಮಣ್ಣು ಸೇರುವುದು ನಿಶ್ಚಿತ ನಾವು ಜೀವಿಸಿದ ಸಮಯದಲ್ಲಿ ಮಾಡಿದ ಪುಣ್ಯ ಕಾರ್ಯಗಳು ಅಜ ರಾಮರವಾಗಿ ನೆಲೆಸಿರುತ್ತವೆ ಎಂದು ಮುಕ್ತಿಮಂದಿರ ಧರ್ಮ ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರಮುಕ್ತಿ ಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು ಅವರು ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಸಾಕ್ಷಿಯಾಗಿರುವ ಬನ್ನಿಕಟ್ಟಿ ಈಶ್ವರ ದೇವರ ಪೂಜಾ ಕಾರ್ಯಕ್ರಮದ ಅಂಗವಾಗಿ, ದಿ, ಶ್ರೀಮತಿ ಶಂಕ್ರಮ್ಮ ಕೊಂ. ಪರಮೇಶ್ವರ​‍್ಪ ಬಳಿಗಾರ ಅವರ ಪುಣ್ಯಸ್ಮರಣೆ ನಿಮಿತ್ತನಡೆದ ಅಮೃತಾರೆ​‍್ಣ ಕಾರ್ಯಕ್ರಮದ ಅಂಗವಾಗಿ ಬನ್ನಿಕಟ್ಟಿಯ ಮಂದಿರಕ್ಕೆ ಪೂಜೆ ಸಲ್ಲಿಸಿ ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು ಸಾನಿಧ್ಯ ವಹಿಸಿದ್ದ ಇನ್ನೂರ ಪೂಜ್ಯರಾದ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾ ಸ್ವಾಮಿಗಳು ಮಾತನಾಡಿ ನಮಗೆ ಜನ್ಮ ನೀಡಿ ನಮ್ಮ ಬೆಳವಣಿಗೆ ಕಾರಣರಾದ ತಂದೆ ತಾಯಿ ಹಾಗೂ ಪೂರ್ವಜರ ಉಪಕಾರವನ್ನು ಸ್ಮರಿಸುವುದು ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಪ್ರಾರ್ಥಿಸುವುದು ಮುಂದಿನ ಪೀಳಿಗೆಗೆ ಹಿರಿಯರ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹಿರಿಯರ ನೆನಪಿನ ಸ್ಮರಣಾರ್ಥ ಬನ್ನಿಕಟ್ಟಿಯ ಮಂದಿರವನ್ನು ನಿರ್ಮಾಣ ಮಾಡಿದ್ದು ಬಳಿಗಾರ ಕುಟುಂಬದ ಕಾರ್ಯ ಅವಿ ಸ್ಮರಣ್ಯವಾಗಿದೆ ಎಂದರು ಕಾರ್ಯಕ್ರಮದಲ್ಲಿ ಗಜ್ಜಿಗಟ್ಟಿ ಮಠದ ಶಿವಲಿಂಗ ಶರ ಮೂರ್ತಿಶ್ವರ ಮಹಾ ಸ್ವಾಮೀಜಿಗಳು ಮಾಜಿ ಶಾಸಕರಾದ ಜಿ.ಎಸ್‌. ಗಡ್ಡ ದೇವರಮಠ ನಡೋಜ ಮನು ಪರಮೇಶ್ವರ​‍್ಪ ಬಳಿಗಾರ ಟಿ ಈಶ್ವರ ಗ್ಯಾರೆಂಟಿ ಸಮಿತಿ ಅಧ್ಯಕ್ಷ ರಾಜು ಮಡಿವಾಳರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್ ಪಿ ಬಳಿಗಾರ ಮಧು ಬಳಿಗಾರ ಆನಂದ ಬಳಿಗಾರ ಮಹೇಶ್ ಬಳಿಗಾರ ಸುನಿಲ ಮಹಾಂತಶೆಟ್ಟಿರ್ ವಿಜಿ ಪಡಿಗೇರಿ ಸೋಮಣ್ಣ ಡಾಣಗಲ್ ವೀರಣ್ಣ ಪವಾಡದ ಡಿ ವೈ ಹುನಗುಂದ ರಾಜರತ್ನ ಹುಲಗೂರ ಸಿದ್ದಣ್ಣ ಯಲಿಗಾರ ನಾರಾಯಣ ಹರವಿ ಈರಣ್ಣ ಅಕ್ಕೂರು ಸೇರಿದಂತೆ ಅನೇಕ ರಾಜಕೀಯ ಮುಖಂಡರು ಶಿಗ್ಲಿ ಗ್ರಾಮದ ಗುರು ಹಿರಿಯರು ಬಳಿಗಾರ ಕುಟುಂಬಸ್ಥರು ಸೇರಿದಂತೆ ಅಪಾರ ಅಭಿಮಾನಿಗಳು ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು 


ಸುದ್ದಿ ಓದಿ