ಗದಗ

ಅಸುಂಡಿ ಗ್ರಾಮದ ಮಂಗಳಾ ವಿ. ರಡ್ಡೇರ ಅವರಿಗೆ ಪಿಎಚ್‌.ಡಿ ಪದವಿ ಪ್ರಧಾನ

ಅಸುಂಡಿ ಗ್ರಾಮದ ಮಂಗಳಾ ವಿ. ರಡ್ಡೇರ ಅವರಿಗೆ ಪಿಎಚ್‌.ಡಿ ಪದವಿ ಪ್ರಧಾನ

ಗದಗ  14: ಗದಗ ತಾಲೂಕಿನ ಅಸುಂಡಿ ಗ್ರಾಮದ ಸಂಶೋಧನಾ ವಿಧ್ಯಾರ್ಥಿ  ಮಂಗಳಾ ವಿ. ರಡ್ಡೇರ ಅವರು ಇಂಗ್ಲಿಷ್ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌.ಡಿ) ಪದವಿ ಪಡೆದಿದ್ದಾರೆ.ರಾಜಸ್ಥಾನದ ಜೈಪುರದಲ್ಲಿರುವ ಡಾ. ಕೆ. ಎನ್‌. ಮೋದಿ ವಿಶ್ವವಿದ್ಯಾಲಯವುವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಿರಾಜ್ ಫಾತಿಮಾ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿತ್ತು. ಅಸುಂಡಿ ಗ್ರಾಮದ ಮಂಗಳಾ ವಿ. ರಡ್ಡೇರ ಅವರು ಉನ್ನತ ಶೈಕ್ಷಣಿಕ ಸಾಧನೆ ಮಾಡಿರುವುದು ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆಗೆ ಕುಟುಂಬದವರು, ಬಂಧುಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ