ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೋರಗಿ ಕುಟುಂಬ ; ಕಲಾಪ್ರತಿಭೆಗೆ ಮೆಚ್ಚುಗೆ
ದೇವರ ಹಿಪ್ಪರಗಿ 14 : ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ದಿ.ಭೀಮರಾಯ ಹಣಮಂತ ಬೋರಗಿ ಅವರು 2018ರಲ್ಲಿ ಬಯಲಾಟ(ಸಂಗೀತ ಹಾಗೂ ನಾಟಕ) ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋರಗಿ ಕುಟುಂಬದ ತಂದೆ ಹಾಗೂ ಮಗಳು ಭಾಗವಹಿಸುತ್ತಿದ್ದು, ತಮ್ಮ ಸಂಗೀತ ಪ್ರತಿಭೆಯ ಮೂಲಕ ನಾಡಿನ ಗಮನ ಸೆಳೆಯುತ್ತಿದ್ದಾರೆ . ಸತತ ಎರಡನೇ ವರ್ಷ ಮೈಸೂರು ದಸರಾ ವೇದಿಕೆಯಲ್ಲಿ ವಚನ ಗಾಯನಕ್ಕೆ ಪಾತ್ರರಾಗುತ್ತಿರುವುದು ವಿಶೇಷವಾಗಿದೆ. ಅ. 17ರಂದು ಸುಗಮ ಸಂಗೀತ ಗಾಯನಅ. 17, 2026ರಂದು ರಾತ್ರಿ 8:30 ಗಂಟೆಗೆ ಇದೇ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಸಂಗೀತ ವಿದ್ವಾಂಸ ಹಣಮಂತಕುಮಾರ ಬೋರಗಿ ಅವರು ಚಿಕ್ಕ ಗಡಿಯಾರ ವೇದಿಕೆಯಲ್ಲಿ ಸುಗಮ ಸಂಗೀತ ಗಾಯನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮೂರನೇ ತಲೆಮಾರಿನ ಕಲಾ ಪರಂಪರೆರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಬೋರಗಿ ಕುಟುಂಬವು ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ. ತಂದೆ ಹಣಮಂತಕುಮಾರ ಬೋರಗಿ ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದರೆ, ಮಗಳು ಸಂಗೀತ ಬೋರಗಿ ಅವರು ವಚನ ಗಾಯನದ ಮೂಲಕ ಕುಟುಂಬದ ಕಲಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.ಪ್ರಸ್ತುತ ರಾಯಚೂರು ಜಿಲ್ಲೆಯಲ್ಲಿ ವಾಸವಾಗಿರುವ ಬೋರಗಿ ಕುಟುಂಬ, ಮೈಸೂರು ದಸರಾ ಉತ್ಸವದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಗಾಯನ ಪ್ರಸ್ತುತಪಡಿಸುವ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸುತ್ತಿದೆ. ತಂದೆ ಮತ್ತು ಮಗಳ ಈ ಸಾಧನೆಗೆ ಯಲಗೋಡ ಗ್ರಾಮ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.