ರಾಣೆಬೆನ್ನೂರ

ಜ್ಞಾನ-ತಂತ್ರಜ್ಞಾನದ ಭರಾಟೆಯಲ್ಲಿ ಗ್ರಾಮೀಣ ಪರಂಪರೆ ಮರೆಯಾಗದಿರಲಿ- ಡಾ. ಆರ್‌.ಎಂ. ಕುಬೇರ​‍್ಪ

ಜ್ಞಾನ-ತಂತ್ರಜ್ಞಾನದ ಭರಾಟೆಯಲ್ಲಿ ಗ್ರಾಮೀಣ ಪರಂಪರೆ ಮರೆಯಾಗದಿರಲಿ- ಡಾ. ಆರ್‌.ಎಂ. ಕುಬೇರ​‍್ಪ
Let rural heritage not fade away amidst the rapid growth of knowledge and technology – Dr. R.M. Kube

ರಾಣೆಬೆನ್ನೂರು :14 ಇಂದಿನ ಜ್ಞಾನ ವಿಜ್ಞಾನ ತಂತ್ರಜ್ಞಾನ ವ್ಯವಸ್ಥೆಯ ಭರಾಟೆಯಲ್ಲಿ ಯುವ ಜನಾಂಗ ನಮ್ಮ ಗ್ರಾಮ ಸಂಸ್ಕೃತಿಯ ನೈಜ ಪರಂಪರೆ ಆಚಾರ ವಿಚಾರ ಮತ್ತು ಸಂಸ್ಕಾರ ಮರೆಯುತ್ತಿರುವುದು ವಿಷಾಧಕರ ಸಂಗತಿ ಎಂದು ಬಿ.ಎ. ಜೆ.ಎಸ್‌.ಎಸ್‌. ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಆರ್‌.ಎಂ. ಕುಬೇರ​‍್ಪ ಹೇಳಿದರು.   ಅವರು ತಾಲೂಕಿನ ಸಮೀಪದ ಹೊಸ ಹೂಲಿಹಳ್ಳಿ ಗ್ರಾಮದಲ್ಲಿ, ಬಿ..ಎ. ಜೆ. ಎಸ್‌.ಎಸ್‌. ಸ್ವತಂತ್ರ ಪದವಿ ಪೂರ್ವ ಮಹಿಳಾ ಕಾಲೇಜು ಆಯೋಜಿಸಿದ್ದ,  2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ  ಉದ್ಘಾಟಿಸಿ ಮಾತನಾಡಿದರು.  

 ಇಂದಿನ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ನಡೆಯುವ ಶಿಕ್ಷಣಕಷ್ಟೇ ಸೀಮಿತವಾಗದೆ, ಸಮಾಜದಲ್ಲಿ ಎದುರಿಸಬಹುದಾದ ಅನೇಕ ಸವಾಲುಗಳ ಕುರಿತು ಸೂಕ್ಷ್ಮತೆ ಮತ್ತು ಮಾರ್ಮಿಕತೆಯಿಂದ ತಿಳಿದುಕೊಳ್ಳಬೇಕಾಗಿದೆ. ಅದಕ್ಕೆ ಕೇವಲ ಶಿಕ್ಷಣಕಷ್ಟೇ ಸೀಮಿತವಾಗದೆ ಸಮಾಜದ ಮುಖ್ಯ ವಾಹಿನಿಯಲ್ಲಿರುವ ಕೌಶಲ್ಯ ಭರಿತ ಮತ್ತು ಉದ್ಯೋಗ ಅವಲಂಬಿತ ಶಿಕ್ಷಣ ಹೊಂದಬೇಕಾದ ಇಂದಿನ  ಅಗತ್ಯವಿದೆ ಎಂದರು.   ರಾಷ್ಟ್ರೀಯ ಯೋಜನಾ ಶಿಬಿರಗಳು ಗ್ರಾಮ ಸಂಸ್ಕೃತಿಯ ಮಹತ್ವ ಮತ್ತು ನಿತ್ಯ ನೈಜ   ನಾಗರಿಕ ಬದುಕಿ ನ ಜೀವನ ಪಾಠವನ್ನು ಕಲಿಸುತ್ತದೆ. ಶಿಬಿರದಲ್ಲಿ ಗ್ರಾಮ ಸಂಸ್ಕೃತಿಯ ಪರಂಪರೆಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಾದ  ಅಗತ್ಯವಿದೆ ಎಂದರು.   ಗ್ರಾಮದ ಹಿರಿಯ ಮುಖಂಡ ಶಾಲಾ ಅಭಿವೃದ್ಧಿ ಸುಧಾರಣಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಅಜರೆಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  

 ಮುಖ್ಯ ಅತಿಥಿಗಳಾಗಿ, ಪ್ರಾಚಾರ್ಯ ಬಿ.ಬಿ. ಪಟ್ಟಣಶೆಟ್ಟಿ, ಮಹಾಂತೇಶ ಕಡ್ಡಿ ಖಿ., ರಾಷ್ಟ್ರೀಯ ಸೇವಾ ಯೋಜನೆ  ವಿಭಾಗೀಯ ಅಧಿಕಾರಿ ಪರಶುರಾಮ ಗೊಬ್ಬಿಮನಿ, ಗೋಪಾಲಕೃಷ್ಣ ಆರ್ ಎಸ್ ಎಚ್, ಪುಟ್ಟೇಗೌಡರ, ನಾಗರಾಜ ಅಜರಡ್ಡಿ, ನಾಗರಾಜ ಮುದೇನೂರು,  ಮೂಡಲಮನಿ, ಕೋಟೆಪ್ಪ ತಗ್ಗಾಳೇರಿ,  ವೇದಮೂರ್ತಿ ಹಿರೇಮಠ. ವೇದಮೂರ್ತಿ,  ನಾಮ ದೇವರೆಡ್ಡಿ ಧನಸಿ, ನಿಂಗಪ್ಪ ಕರೂರು,  ಲಕ್ಷ್ಮಣಂತಿ, ಮೇಘಾ,  ಸುನಿತಾ ಮತ್ತಿತರರು ಉಪಸ್ಥಿತರಿದ್ದರು.   ಯೋಜನಾಧಿಕಾರಿ ಬಿ.ಕೆ.ಕೊಡಣ್ಣನವರ ಸ್ವಾಗತಿಸಿ, ಪ್ರಾಚಾರ್ಯ ಬಿ.ಬಿ.ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾ ಘಾಳೆ ನಿರೂಪಿಸಿ, ಅಖಿಲೇಶ್ ಬಳಿಗಾರ ವಂದಿಸಿದರು.   ನಂತರ ಕಾಲೇಜಿನ ಶಿಬಿರಾರ್ಥಿಗಳಿಂದ ನಡೆದ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮದ ನಾಗರಿಕರ ಗಮನ ಸೆಳೆದವು. ಇಂದಿನಿಂದ ಆರಂಭವಾಗಿರುವ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವು ವಾರಗಳ ಕಾಲ ಗ್ರಾಮದಲ್ಲಿ ಜರುಗಲಿದೆ. 


ಸುದ್ದಿ ಓದಿ