ರಾಣೆಬೆನ್ನೂರ

ವಾಣಿಜ್ಯ ನಗರಿ ರಾಣೆಬೆನ್ನೂರಲ್ಲಿ ವಿವಿಧ ಅವತಾರಗಳಲ್ಲಿ ಕಂಗೊಳಿಸುತ್ತಿರುವ ಶಕ್ತಿ ದೇವತೆಗಳು

ವಾಣಿಜ್ಯ ನಗರಿ ರಾಣೆಬೆನ್ನೂರಲ್ಲಿ ವಿವಿಧ ಅವತಾರಗಳಲ್ಲಿ ಕಂಗೊಳಿಸುತ್ತಿರುವ ಶಕ್ತಿ ದೇವತೆಗಳು


ರಾಣೆಬೆನ್ನೂರು :12 ಉತ್ತರ ಕರ್ನಾಟಕದ ಹೆಬ್ಬಾಗಿಲು, ಹಾವೇರಿ ಜಿಲ್ಲೆಯ ವಾಣಿಜ್ಯ ನಗರ ರಾಣೆಬೆನ್ನೂರು ನಗರದ ಮತ್ತು ತಾಲೂಕಿನ ವಿವಿಧ ಶಕ್ತಿ ಕೇಂದ್ರ ಸ್ಥಾನವಾಗಿರುವ ವಿವಿಧ ದೇವಾಲಯಗಳಲ್ಲಿ 11 ದಿವಸಗಳ ಕಾಲ ನಾಡಿನ ವಿಶ್ವ ವಿಖ್ಯಾತ ಶಕ್ತಿ ದೇವತೆಗಳ ರೂಪಕದಲ್ಲಿ ನಗರದ ಮತ್ತು ತಾಲೂಕಿನ ವಿವಿಧ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ವಿಶೇಷ ವಿವಿಧ ಅಲಂಕಾರಗಳ ಮೂಲಕ ಆಯಾ ಪ್ರದೇಶಗಳ ದೇವಾಲಯಗಳಲ್ಲಿ ಆಯಾ ದೇವತೆಗಳು ತನ್ನ ದರ್ಶನಾಶೀರ್ವಾದ ಕರುಣಿಸಲಿದ್ದಾರೆ.  

ಸಾಂಪ್ರದಾಯಕವಾಗಿ ಘಟಸ್ಥಾಪನೆಯ ಆರಂಭಿಕ ದಿವಸವಾದ ರವಿವಾರ, ಇಲ್ಲಿನ ಇತಿಹಾಸ ಪ್ರಸಿದ್ಧ, ಮೇಡ್ಲೆರಿ ರಸ್ತೆಯ ಗ್ರಾಮ ದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಾಲಯದಲ್ಲಿ, ಶ್ರೀದೇವಿಗೆ ಸಪ್ತಮಾತ್ರು ಕೆಯರಲ್ಲಿ ಓರ್ವರಾದ ಶ್ರೀ ಮಹೇಶ್ವರಿ ಅಮ್ಮನ ರೂಪಾಲಂಕಾರದ್ಲಲಿದ್ದಾರೆ.  

ಪಶ್ಚಿಮ ಭಾಗದ ಮಾರುತಿ ನಗರದ, ಬೆಂಚಿ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿಗೆ ಸವದತ್ತಿ ಶ್ರೀ, ರೇಣುಕಾ ಎಲ್ಲಮ್ಮ ದೇವಿಯ ರೂಪಕದಲ್ಲಿ ಕಂಗೊಳಿಸಿದ್ದಾರೆ. ಗುತ್ತಲ ಬಸ್ ಸ್ಟ್ಯಾಂಡ್ ರಸ್ತೆ, ಶ್ರೀ ಸ್ವಕುಳ ಸಾಳಿ ಸಮಾಜದ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ, ಶ್ರೀದೇವಿಗೆ ಬಾದಾಮಿ ಬನಶಂಕರಿ ದೇವಿಯ ರೂಪಕ ನಿರೂಪಿಸಿದ್ದಾರೆ.  

ದೊಡ್ಡಪೇಟೆಯ ಎಸ್‌. ಎಸ್‌. ಕೆ. ಸಮಾಜದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ಶ್ರೀದೇವಿಗೆ  

ವಿಶೇಷ ಅಲಂಕಾರ ಮಾಡಲಾಗಿದೆ. ಪ್ರತಿನಿತ್ಯವೂ ಎಲ್ಲ ದೇವಾಲಯಗಳಲ್ಲಿರುವ ಶಕ್ತಿ ದೇವತೆಗಳಿಗೆ ವಿವಿಧ ಅಲಂಕಾರಗಳ ರೂಪಕಗಳು ಸಾರ್ವಜನಿಕರಿಗೆ ಗಮನ ಸೆಳೆಯುತ್ತಿದ್ದು ಭಕ್ತರು ಅತ್ಯಂತ ಭಕ್ತಿ ಭಾವದೊಂದಿಗೆ ತಮ್ಮ ಭಕ್ತಿಯ ಪರಾಕಾಷ್ಟೇ ಮೆರೆಯುತ್ತಿದ್ದಾರೆ. ಒಟ್ಟು ಒಟ್ಟು 11 ಪೂಜೆ ಇದ್ದು ಅದರಲ್ಲಿ ಇದೇ 21ರಂದು ವಿಜಯದಶಮಿ ಪರಂಪರೆಯ ಕಾರ್ಯಕ್ರಮ ಬಿರುಗಲಿದೆ ಎಂದು ಆಯಾ ದೇವಾಲಯಗಳ ಧರ್ಮದರ್ಶಿಗಳು ತಿಳಿಸಿದ್ದಾರೆ. 


ಸುದ್ದಿ ಓದಿ